LATEST NEWS
ಪಲಿಮಾರು ಶ್ರೀಗಳಿಂದ ಕೊಡಗಿನ ಗ್ರಾಮ ದತ್ತು

ಪಲಿಮಾರು ಶ್ರೀಗಳಿಂದ ಕೊಡಗಿನ ಗ್ರಾಮ ದತ್ತು
ಉಡುಪಿ ಅಗಸ್ಟ್ 22: ಪ್ರಕೃತಿ ವಿಕೋಪಕ್ಕೆ ಗುರಿಯಾದ ಕೊಡಗಿನ ಜನರ ಪುನರ್ವಸತಿ ಕಾರ್ಯದಲ್ಲಿ ಪರ್ಯಾಯ ಪಲಿಮಾರು ಶ್ರೀಕೃಷ್ಣ ಮಠ ತೊಡಗಿಸಿಕೊಳ್ಳಲಿದೆ. ಕೊಡವರ ಕಷ್ಟಕ್ಕೆ ಇಡೀ ರಾಜ್ಯವೇ ಮಿಡಿಯುತ್ತಿದ್ದು ಉಡುಪಿಯ ಪಲಿಮಾರು ಮಠಾಧೀಶರು ಸಹಾಯಕ್ಕೆ ಮುಂದಾಗಿದ್ದಾರೆ.
ಈ ಹಿನ್ನಲೆಯಲ್ಲಿ ಕೊಡಗಿನ ನೆರೆ ಪೀಡಿತ ಒಂದು ಗ್ರಾಮ ದತ್ತು ಸ್ವೀಕಾರ ಯೋಜನೆಯನ್ನು ಕೈಗೊಳ್ಳಲಾಗಿದೆ ಪಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥ ಸ್ವಾಮಿಜಿ ತಿಳಿಸಿದ್ದಾರೆ. ಉಡುಪಿ ಕೃಷ್ಣ ಮಠದ ಪರ್ಯಾಯ ಸ್ವಾಮೀಜಿಯಾಗಿರುವ ವಿದ್ಯಾಧೀಶರು ಈ ಮೂಲಕ ಮಾನವೀಯತೆ ತೀರ್ಮಾನ ಕೈಗೊಂಡಿದ್ದಾರೆ.

ಕೃಷ್ಣಮಠ, ಪಲಿಮಾರು ಮಠ ಮತ್ತು ಸಾರ್ವಜನಿಕರ ನೆರೆವಿನಿಂದ ಒಂದು ಗ್ರಾಮದ ನಿರ್ಮಾಣ ಮಾಡುತ್ತೇವೆ ಅಂತ ಹೇಳಿಕೊಂಡಿದ್ದಾರೆ. ಮೊದಲು ಯಾವ ಗ್ರಾಮ ಎನ್ನುವುದು ಗೊತ್ತು ಮಾಡಬೇಕು. ಸಂಬಂಧಪಟ್ಟವರ ಬಳಿ ಈ ಬಗ್ಗೆ ಚರ್ಚೆ ಮಾಡಲಾಗುವುದು. ಅಲ್ಲಿಗೆ ಏನು ಅಗತ್ಯ ಎನ್ನುವುದನ್ನು ಪರಿಶೀಲಿಸಿ ಸೂಕ್ತ ಸೂಕ್ತ ಸಹಾಯ ಮಾಡುವುದಾಗಿ ಹೇಳಿದ್ದಾರೆ.
ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮದ ಮೂಲಕ ಕೊಡಗು ಮತ್ತು ಕೇರಳದ ಪರಿಸ್ಥಿತಿ ತಿಳಿದುಕೊಂಡಿದ್ದೇನೆ. ನಾವು ಊಹಿಸಲೂ ಕಷ್ಟವಾಗಿದೆ. ಅಲ್ಲಿನ ಜನರ ಜೀವನ ಪರಿಸ್ಥಿತಿ ಯಾರಿಗೂ ಬಾರದಿರಲಿ. ಭಗವಂತ ಕಷ್ಟದಿಂದ ಹೊರ ಬರುವ ಶಕ್ತಿ ಕೊಡಲಿ. ನಮ್ಮ ಕೈಲಾದ ಸಹಾಯ ಮಾಡೋಣ, ಸಣ್ಣ ಸಹಾಯ ಕಷ್ಟದಲ್ಲಿರುವವರಿಗೆ ದೊಡ್ಡ ಸಹಾಯವಾಗುತ್ತದೆ. ಕೊಡಗನ್ನು ಕರುನಾಡು ಸೇರಿ ಕಟ್ಟುವ ಕೆಲಸವಾಗಬೇಕು ಅಂತ ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಹೇಳಿದರು.