ಕೊಡಗು ಸಂತ್ರಸ್ಥರಿಗೆ ಪೇಜಾವರ ಶ್ರೀಗಳಿಂದ ಸಹಾಯಹಸ್ತ

ಉಡುಪಿ ಅಗಸ್ಟ್ 22: ಕೊಡಗು ಸಂತ್ರಸ್ಥರಿಗೆ ಪೇಜಾವರ ಶ್ರೀಗಳು ಸಹಾಯ ಹಸ್ತ ನೀಡಿದ್ದು, ಮೊದಲ ಹಂತವಾಗಿ ತಮ್ಮ ಪೇಜಾವರ ಮಠದ ಟ್ರಸ್ಟ್ ನಿಂದ 10 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದಾರೆ.

ತಮ್ಮ ಚಾತುರ್ಮಾಸ್ಯ ವೃತ ಮುಗಿದ ನಂತರ ಪೇಜಾವರ ಶ್ರೀಗಳು ಕೊಡಗು ಭೇಟಿ ನೀಡಲಿದ್ದು, ಹಾನಿಯಾದ ಪ್ರದೇಶಗಳ ಪರಿಸ್ಥಿತಿಯನ್ನು ಅವಲೋಕಿಸಿ ಯಾವ ರೀತಿ ಪರಿಹಾರ ಕಾರ್ಯಗಳನ್ನು ಮಾಡಬೇಕೆಂದು ನಿರ್ಧರಿಸಿ ತಮ್ಮ ಟ್ರಸ್ಟ್ ನಿಂದ ಹೆಚ್ಚಿನ ಹಣ ಬಿಡುಗಡೆ ಮಾಡಿ ಪರಿಹಾರ ಕಾರ್ಯಕೈಗೊಳ್ಳಲಾಗುವುದೆಂದು ಅವರು ಹೇಳಿದರು.

ಭಕ್ತರ ನೆರವಿನಿಂದ ಹೆಚ್ಚಿನ ಹಣಕಾಸು ನೆರವು ನೀಡುವ ಭರವಸೆ ಈ ಸಂದರ್ಭದಲ್ಲಿ ನೀಡಿದ ಪೇಜಾವರ ಶ್ರೀಗಳು, ನೇರವಾಗಿ ಪರಿಹಾರ ಕಾರ್ಯ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಭಕ್ತರು ಇಂತಹ ಸಂದರ್ಭದಲ್ಲಿ ಹೆಚ್ಚಿನ ಸಹಕಾರ ವನ್ನು ಕೊಡಗಿನ ಜನರಿಗೆ ನೀಡಬೇಕಾಗಿದ್ದು, ಜನರು ಇಂತಹ ಪವಿತ್ರ ಕಾರ್ಯಕ್ಕೆ ಸಹಾಯ ಮಾಡಬೇಕೆಂದು ಪೇಜಾವರ ಶ್ರೀಗಳು ಕರೆ ನೀಡಿದ್ದಾರೆ.

VIDEO

4 Shares

Facebook Comments

comments