LATEST NEWS
ದೀಪಕ್ ಕೊಲೆ ಬಗ್ಗೆ ವ್ಯತಿರಿಕ್ತ ಹೇಳಿಕೆ, ಶಾಸಕ ಮೊಯಿದೀನ್ ಬಾವಾ ತನಿಖೆಗೆ ಪಾಲೇಮಾರ್ ಒತ್ತಾಯ

ದೀಪಕ್ ಕೊಲೆ ಬಗ್ಗೆ ವ್ಯತಿರಿಕ್ತ ಹೇಳಿಕೆ, ಶಾಸಕ ಮೊಯಿದೀನ್ ಬಾವಾ ತನಿಖೆಗೆ ಪಾಲೇಮಾರ್ ಒತ್ತಾಯ
ಮಂಗಳೂರು ಜನವರಿ 5: ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆಗೆ ಸಂಬಂಧಿಸಿದಂತೆ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ರನ್ನು ಪೋಲೀಸರು ತನಿಖೆಗೆ ಒಳಪಡಿಸಬೇಕೆಂದು ಮಾಜಿ ಸಚಿವ ಕೃಷ್ಣ.ಜೆ.ಪಾಲೇಮಾರ್ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ದೀಪಕ್ ರಾವ್ ಹತ್ಯೆಯ ಪ್ರಮುಖ ಆರೋಪಿ ಜೊತೆ ಶಾಸಕ ಮೊಯಿದೀನ್ ಬಾವಾ ಅವರು ಇರುವಂತಹ ಫೋಟೋ ಗಳು ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಈ ನಡುವೆ ಶಾಸಕರು ದೀಪಕ್ ಹಂತಕರು ಬಿಜೆಪಿ ಪಕ್ಷದ ಕಾರ್ಯಕರ್ತರು ಎನ್ನುವ ಮೂಲಕ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಯತ್ನದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಒಂದು ವೇಳೆ ಶಾಸಕರು ತಮ್ಮ ಆರೋಪವನ್ನು ಸಾಬೀತುಪಡಿಸದೇ ಹೋದಲ್ಲಿ ಬಿಜೆಪಿ ಪಕ್ಷ ಶಾಸಕರ ಮನೆ ಮುಂದೆಯೇ ಪ್ರತಿಭಟನೆ ನಡೆಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಹತ್ಯೆಯ ಹಿಂದೆ ಸರಕಾರದ ಪಿತೂರಿಯೂ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.