Connect with us

    LATEST NEWS

    ಮಿತ್ರ ರಾಷ್ಟ್ರಗಳು ನಮ್ಮನ್ನು ಭಿಕ್ಷುಕರಂತೆ ನೋಡುತ್ತಿದೆ – ಪಾಕ್ ಪ್ರಧಾನಿ

    ಪಾಕಿಸ್ತಾನ ಸೆಪ್ಟೆಂಬರ್ 17: ಎಸ್ ಸಿಓ ಶೃಂಗಸಭೆಯಲ್ಲಿ ಪಾಕಿಸ್ತಾನದ ಜೊತೆ ಇತರ ರಾಷ್ಟ್ರಗಳು ನಡೆದುಕೊಳ್ಳುತ್ತಿರುವ ರೀತಿಗೆ ಇದೀಗ ಪಾಕಿಸ್ತಾನ ಪ್ರಧಾನಿ ತಮ್ಮ ಅಸಮಧಾನ ಹೊರಹಾಕಿದ್ದು, ಮಿತ್ರದೇಶಗಳು ಪಾಕಿಸ್ತಾನವನ್ನು ಭಿಕ್ಷುಕನಂತೆ ನೋಡುತ್ತಿವೆ ಎಂದು ಹೇಳಿದ್ದಾರೆ.


    ಪಾಕಿಸ್ತಾನದಲ್ಲಿ ಆರ್ಥಿಕತೆ ಸಂಪೂರ್ಣ ಹದಗೆಟ್ಟಿದ್ದು, ಇದೀಗ ಪ್ರವಾಹದಿಂದಾಗಿ ಪರಿಸ್ಥಿತಿ ದಿನದಿಂದ ದಿನಕ್ಕೆ ಆರ್ಥಿಕತೆ ಮತ್ತೆ ಕುಸಿಯುತ್ತಿದೆ. ಈ ನಡುವೆ ಮಿತ್ರ ರಾಷ್ಟ್ರಗಳ ಯಾವುದೇ ದೇಶದ ಮುಖ್ಯಸ್ಥರಿಗೆ ಕರೆ ಮಾಡಿದ್ರೂ, ಇವರೇನೋ ಕೇಳೋಕೆ ಕರೆ ಮಾಡಿದ್ದಾರೆ ಅಂತಾನೆ ಭಾವಿಸುತ್ತಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.


    ನಾನು ಏಪ್ರಿಲ್‌ನಲ್ಲಿ ಅಧಿಕಾರ ವಹಿಸಿಕೊಂಡಾಗ ಪಾಕಿಸ್ತಾನದ ಆರ್ಥಿಕತೆ ಅಳಿವಿನ ಅಂಚಿನಲ್ಲಿತ್ತು. ನಮ್ಮ ಸರ್ಕಾರ ಸ್ಥಾಪನೆಯಾದ ಬಳಿಕ ಸತತ ಪರಿಶ್ರಮದಿಂದ ದೇಶ ಉಳಿದಿದೆ ಜೊತೆಗೆ ಆರ್ಥಿಕ ಅಸ್ಥಿರತೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಿದೆ ಎಂದು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply