KARNATAKA
ವೃಕ್ಷ ದೇವತೆ ಗೆ ಒಲಿದು ಬಂದ ಪದ್ಮಶ್ರೀ ಪ್ರಶಸ್ತಿ
ವೃಕ್ಷ ದೇವತೆ ಗೆ ಒಲಿದು ಬಂದ ಪದ್ಮಶ್ರೀ ಪ್ರಶಸ್ತಿ
ಮಂಗಳೂರು ಜನವರಿ 26: ವೃಕ್ಷ ದೇವತೆ ಎಂದೆ ಪ್ರಸಿದ್ದಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರಿನ ಹೊನ್ನಳ್ಳಿ ತುಳಸಿ ಗೌಡ ಪದ್ಮಶ್ರೀ ಪ್ರಶ್ತಿಗೆ ಆಯ್ಕೆಯಾದ ಬೆನ್ನಲೆ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ.
ತುಳಸಿ ಗೌಡ ಪ್ರಶಸ್ತಿ ಗೆ ಆಯ್ಕೆಯಾದ ಸುದ್ದಿ ತಿಳಿದ ಸ್ಥಳೀಯರು ಹಾಗು ಪ್ರಮುಖರು ತುಳಸಿ ಗೌಡ ಮನೆಗೆ ತೆರಳಿ ಸಿಹಿ ತಿನಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಸಾಕಷ್ಟು ಪ್ರಶಸ್ತಿಯ ಮುಡಿಗೇರಿಸಿಕೊಂಡ ತುಳಸಿ ಗೌಡ ಪದ್ಮಶ್ರೀ ಪ್ರಶ್ತಿಗೆ ಆಯ್ಕೆಯಾಗಿದ್ದು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹೆಮ್ಮೆಯ ಸಂಗತಿ ಜೊತೆ ಸಂಭ್ರಮ ಹುಟ್ಟಿಸಿದೆ.
ಇನ್ನೂ ತುಳಸಿ ಗೌಡಾ ಹಾಲಕ್ಕಿ ಸಮೂದಾಯದಲ್ಲಿ ಹುಟ್ಟಿದವಳಾಗಿದ್ದಾಳೆ ಈಹಿಂದೆ ಇದೆ ಸಮೂದಾಯದ ಸಕ್ರಿ ಗೌಡಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದ್ದು ಎರಡನೇ ಬಾರಿಗೆ ಒಂದೆ ಸಮೂದಾಯಕ್ಕೆ ಪದ್ಮಶ್ರೀ ಒಲಿದ ಸಂಭ್ರಮ ಮತ್ತು ಹೆಮ್ಮೆ ಜಿಲ್ಲೆಯದಾಗಿದೆ.
ಹುಟ್ಟಿನಿಂದ ಪರಿಸರ ಪ್ರೇಮ ಮೈಗೂಡಿಸಿಕೊಂಡು ಬಂದ ತುಳಸಿ ಗೌಡಾ ಸಾವಿರಾರು ಗಿಡಗಳನ್ನ ನೆಟ್ಟು ಪೋಷಿಸಿದ್ದಾಳೆ. ಜೊತೆಗೆ ಇಂದು ಅದೆಷ್ಟೊ ಗಿಡಗಳು ಮರವಾಗಿ ಹೆಮ್ಮರವಾಗಿ ನೆರಳನ್ನ ನೀಡುತ್ತಿದೆ. ಈ ಸಾಧನೆಯನ್ನ ಕಂಡ ಭಾರತ ಸರಕಾರ ತುಳಸಿ ಗೌಡರನ್ನ ಪದ್ಮಶ್ರೀ ಗೆ ಆಯ್ಕೆ ಮಾಡಿದ್ದು ಸಂತಸದ ಸಂಗತಿ ಆಗಿದೆ.