ಗಣರಾಜ್ಯೋತ್ಸವ ಸಂಭ್ರಮ- ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಸನ್ಮಾನ

ಮಂಗಳೂರು ಜನವರಿ 26: 71ನೇ ಗಣರಾಜ್ಯೋತ್ಸವವನ್ನು ನಗರದ ನೆಹರೂ ಮೈದಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಧ್ವಜಾರೋಹಣಗೈದರು.

ನಂತರ ಮಾತನಾಡಿದ ಅವರು ದುಷ್ಟಶಕ್ತಿಗಳು ತಲೆ ಎತ್ತದಂತೆ‌ ಮಾಡುವುದರ ಜೊತೆಗೆ ಸರ್ವಧರ್ಮಗಳನ್ನು ಗೌರವಿಸಿ, ಸಮಾಜದ ಶಾಂತಿಗೆ ಭಂಗ ತರುವ ಚಟುವಟಿಕೆಗಳಿಗೆ ಅವಕಾಶ ಕೊಡದ ಸರ್ವಧರ್ಮೀಯರು ಸಮನ್ವಯದಲ್ಲಿ ಬಾಳಲು ಪ್ರತಿಜ್ಞೆ ಮಾಡೋಣ. ಜಿಲ್ಲೆಯಲ್ಲಿ ಕಳೆದ ಅತಿವೃಷ್ಟಿಯಿಂದ 893 ಕೋ.ರೂ. ನಷ್ಟವಾಗಿದೆ. ಆ ಪೈಕಿ 1914 ಕುಟುಂಬಗಳಿಗೆ ಆರ್ಥಿಕ ‌ನೆರವು‌ ನೀಡಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ದ.ಕ. ಜಿಲ್ಲೆಯ 10 ಮಂದಿಗೆ ಸರ್ವೋತ್ತಮ‌ ಪ್ರಶಸ್ತಿ ಪ್ರದಾನಿಸಲಾಯಿತು ಹಾಗು 32 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

Facebook Comments

comments