LATEST NEWS
ಸುರತ್ಕಲ್ – ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಸಾವು
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಮಂಗಳೂರು ಫೆಬ್ರವರಿ 13: ರಸ್ತೆ ದಾಟುತ್ತಿದ್ದ ವೇಳೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಬೈಕಂಪಾಡಿಯಲ್ಲಿ ನೀಲಗೀರಿಸ್ ಅಂಗಡಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ನಡೆದಿದೆ.
ಮೃತರನ್ನು ಹೊಸಬೆಟ್ಟುವಿನ ನವನಗರದ ರಿಜೇಂಟ್ ಪಾರ್ಕ್ ಬಳಿಯ ನಿವಾಸಿ ಮೋಹನ್ ಅವರ ಪತ್ನಿ ಉಷಾ ಎಂದು ಗುರುತಿಸಲಾಗಿದೆ. ಹೊಸಬೆಟ್ಟುವಿನ ರಾಘವೇಂದ್ರ ಮಠಕ್ಕೆ ಹೋಗಿದ್ದ ಅವರು ಅಲ್ಲಿಂದ ಮರಳುವಾಗ ಈ ಅಪಘಾತ ಸಂಭವಿಸಿತ್ತು. ರಸ್ತೆಗೆ ಬಿದ್ದ ಉಷಾ ಅವರ ಹಣೆಗೆ ಜಜ್ಜಿದ ಗಾಯವಾಗಿತ್ತು. ಬಲಗಾಲಿನ ಮೂಳೆ ಮುರಿದಿತ್ತು. ಬಲ ಹಾಗೂ ಎಡ ಕೈಗಳಲ್ಲಿ ತರಚಿದ ಗಾಯಗಳಾಗಿದ್ದವು. ಅವರನ್ನು ಚಿಕಿತ್ಸೆಗಾಗಿ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಿಂದಾಗಿ ದ್ವಿಚಕ್ರ ವಾಹನ ಸವಾರ ರವಿಚಂದ್ರನ್ ಅವರೂ ಗಾಯಗೊಂಡಿದ್ದು ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಪೊಲೀಸರು ಮಾಹಿತಿ ನೀಡಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)