Connect with us

LATEST NEWS

ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ಬೆಂಕಿ – ಪರಿಸರದಲ್ಲಿ ಆವರಿಸಿದ ದಟ್ಟ ಹೊಗೆ

ಮಂಗಳೂರು ಜನವರಿ 06: ಮಂಗಳೂರು ನಗರದ ಪಚ್ಚನಾಡಿಯಲ್ಲಿರುವ ಮಹಾನಗರ ಪಾಲಿಕೆ ತಾಜ್ಯ ವಿಲೇವಾರಿ ಘಟಕ (ಡಂಪಿಂಗ್ ಯಾರ್ಡ್) ಸಮೀಪ ಇಂದು ಅಪರಾಹ್ನ 2 ಗಂಟೆ ಸುಮಾರಿಗೆ ಅಗ್ನಿ ಅವಘಡ ಕಾಣಿಸಿಕೊಂಡ ಹಿನ್ನಲೆ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ.


ಸದ್ಯ ಬೆಂಕಿ ಆರಿಸಲು ಅಗ್ನಿಶಾಮಕ ದಳ ಎನ್ ಎಮ್ ಪಿಟಿ, ಕದ್ರಿ ಹಾಗು ಪಾಂಡೇಶ್ವರದ ಏಳೆಂಟು ಅಗ್ನಿಶಾಮಕದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಿಸಿ ಬೆಂಕಿ ನಂದಿಸುತ್ತಿದ್ದಾರೆ.

ಸುತ್ತಮುತ್ತಲಿನ ಪ್ರದೇಶ ಸಂಪೂರ್ಣವಾಗಿ ಹೊಗೆಯಿಂದ ಆವೃತ್ತವಾಗಿದ್ದು ಕಣ್ಣು ಉರಿ, ಉಸಿರಾಟದ ಸಮಸ್ಯೆ ಕೂಡಾ ಪ್ರಾರಂಭವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಹತ್ತಿರದಲ್ಲೇ ಶಿಕ್ಷಣ ಸಂಸ್ಥೆಗಳು ಕೂಡಾ ಇದೆ. ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಾಕುವ ರಾಸಾಯಿನಿಕಗಳಿಂದ ಕೂಡಾ ಅನೇಕ ರೀತಿಯ ತೊಂದರೆ ಎದುರಾಗುತ್ತಿದೆ. ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ, ಮೇಯರ್ ಜಯಾನಂದ ಅಂಚನ್, ಆಯುಕ್ತ ಶ್ರೀಧರ್ ಭೇಟಿ ನೀಡಿದ್ದಾರೆ. ಬೆಂಕಿ ದುರಂತದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ ಬೇಟಿ ಮಾಡಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿ, ” ತ್ಯಾಜ್ಯ ವಿಳೇವಾರಿ ಘಟಕದ ಬೆಂಕಿ ನಂದಿಸಲು ಅಗ್ನಿಶಾಮಕ ತಂಡ ಶ್ರಮಿಸುತ್ತಿದ್ದು, ಇದು ತಹಬದಿಗೆ ಬರಲು 26 ಗಂಟೆಗಳಿಗೂ ಹೆಚ್ಚು ಕಾಲ ಬೇಕಾಗಬಹುದು . ಈಗಾಗಲೇ ಜಿಲ್ಲಾಧಿಕಾರಿಯವರಲ್ಲಿ ಈ ಕುರಿತು ಚರ್ಚಿಸಿದ್ದು, ಬೆಂಕಿ ನಂದಿಸಲು ತಡವಾದ ಸ್ಥಳೀಯ ನಿವಾಸಿಗಳನ್ನು ತಾತ್ಕಲಿಕವಾಗಿ ಸ್ಥಳಾಂತರ ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದರು

Share Information
Continue Reading
Advertisement
Click to comment

Leave a Reply

Your email address will not be published. Required fields are marked *