LATEST NEWS
ಉಡುಪಿ ಜಿಲ್ಲೆಯ ಹೆಚ್ಚುವರಿ ಎಸ್ಪಿ -2 ಆಗಿ ಪರಮೇಶ್ವರ ಅನಂತ್ ಹೆಗ್ಡೆ ನೇಮಕ

ಉಡುಪಿ ನವೆಂಬರ್ 30: ಮಂಗಳೂರು ಸಿಸಿಬಿ ಪೊಲೀಸ್ ವಿಭಾಗದಲ್ಲಿ ಎಸಿಪಿ ಆಗಿದ್ದ ಪಿ.ಎ. ಹೆಗಡೆ ಹೆಚ್ಚುವರಿ ಎಸ್ಪಿ ದರ್ಜೆಗೆ ಭಡ್ತಿ ಪಡೆದಿದ್ದು, ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ-2 ರಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಇಬ್ಬರು ಹೆಚ್ಚುವರಿ ಎಸ್ಪಿಗಳು ಕಾರ್ಯನಿರ್ವಹಿಸಲಿದ್ದಾರೆ.

thmb – 1
ಮಂಗಳೂರಿನಲ್ಲಿ ಡಿವೈಎಸ್ಪಿ ದರ್ಜೆಯಲ್ಲಿದ್ದ ಪರಮೇಶ್ವರ ಅನಂತ ಹೆಗಡೆ ಸಿಸಿಬಿ ವಿಭಾಗಕ್ಕೆ ಎಸಿಪಿ ಹುದ್ದೆಯ ಕರ್ತವ್ಯದಲ್ಲಿದ್ದರು. ಈ ಹಿಂದೆ ಮಂಗಳೂರಿನ ಬಂದರು, ಬಂಟ್ವಾಳ ನಗರ ಠಾಣೆಯಲ್ಲಿ ಎಸ್ಐ ಆಗಿದ್ದ ಪಿಎ ಹೆಗಡೆ, ಮೂಲ್ಕಿ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಭಡ್ತಿ ಹೊಂದಿದ್ದರು. 1994ರಲ್ಲಿ ಪಿಎಸ್ಐ ಆಗಿ ಪೊಲೀಸ್ ಇಲಾಖೆ ಸೇರಿದ್ದ ಅವರು 2006ರಲ್ಲಿ ಮಂಗಳೂರಿನಲ್ಲಿ ರೌಡಿ ನಿಗ್ರಹ ಪಡೆಯಲ್ಲೂ ಕರ್ತವ್ಯ ನಿರ್ವಹಿಸಿದ್ದರು.
