Connect with us

LATEST NEWS

ಅಂಟಾರ್ಟಿಕಾದ ಓಝೋನ್ ಪದರದಲ್ಲಿ ‘ಅತಿದೊಡ್ಡ’ ಮತ್ತು ‘ಆಳವಾದ ರಂಧ್ರ ಪತ್ತೆ, ವಿಜ್ಞಾನಿಗಳಲ್ಲಿ ಆತಂಕ…

ಅಂಟಾರ್ಟಿಕಾದ ಓಝೋನ್ ಪದರದಲ್ಲಿ ‘ಅತಿದೊಡ್ಡ’ ಮತ್ತು ‘ಆಳವಾದ ರಂಧ್ರ ಪತ್ತೆ, ವಿಜ್ಞಾನಿಗಳಲ್ಲಿ ಆತಂಕ…

ನ್ಯೂಯಾರ್ಕ್, ಅಕ್ಟೋಬರ್, 09: ಅಂಟಾರ್ಟಿಕಾದ ಓಝೋನ್ ಪದರದ ರಂಧ್ರವು ಈ ವರ್ಷ ಗರಿಷ್ಟ ಗಾತ್ರಕ್ಕೆ ಬೆಳೆದಿದೆ.

ವಾರ್ಷಿಕವಾಗಿ ಸಂಭವಿಸುವ ಈ ರಂಧ್ರವು ಆಗಸ್ಟ್ ಮಧ್ಯಭಾಗದಿಂದ ವೇಗವಾಗಿ ಬೆಳೆದಿದ್ದು ಮತ್ತು ಅಕ್ಟೋಬರ್ ಆರಂಭದಲ್ಲಿ ಸುಮಾರು 9.2 ದಶಲಕ್ಷ ಚದರ ಮೈಲಿಗಳಷ್ಟು ಎತ್ತರಕ್ಕೆ ಏರಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ತಿಳಿಸಿದೆ.

WMO ಪ್ರಕಾರ, ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಆಳವಾದ ಸ್ಥಿತಿಯಲ್ಲಿದೆ. ಶೀತ ಧ್ರುವದ ಸುಳಿ ಈ ರೀತಿಯ ಬೆಳವಣಿಗೆಗೆ ಕಾರಣವಾಗಿದೆ ಎಂದು ಸಂಶೋಧಕರು ವರದಿ ನೀಡಿದ್ದಾರೆ.

ಓಝೋನ್ ನ ಈ ರೀತಿಯ ಸವಕಳಿಯು ವಾಯುಮಂಡಲದ ತಾಪಮಾನಕ್ಕೆ ನೇರವಾಗಿ ಸಂಬಂಧಿಸಿದ್ದಾಗಿದೆ. ಧ್ರುವೀಯ ವಾಯುಮಂಡಲದ ಮೋಡಗಳು -78 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿ ಮಾತ್ರ ರೂಪುಗೊಳ್ಳುತ್ತವೆ.

ಧ್ರುವೀಯ ವಾಯುಮಂಡಲದ ಮೋಡಗಳು ಐಸ್ ಹರಳುಗಳನ್ನು ಹೊಂದಿದ್ದು ಅದು ಪ್ರತಿಕ್ರಿಯಾತ್ಮಕವಲ್ಲದ ಸಂಯುಕ್ತಗಳನ್ನು ಪ್ರತಿಕ್ರಿಯಾತ್ಮಕಗಳಾಗಿ ಪರಿವರ್ತಿಸುತ್ತದೆ, ಇದು ಓಝೋನ್ ಪದರದ ರಾಸಾಯನಿಕಗಳ ನಾಶದಲ್ಲಿ ಪ್ರಮುಖ ಪಾತ್ರವಾಗಿದೆ.

ಇತ್ತೀಚಿನ ವಾರಗಳಲ್ಲಿ ಸೂರ್ಯನು ದಕ್ಷಿಣ ಧ್ರುವಕ್ಕೆ ಮರಳಿದ ನಂತರ ಮತ್ತು ಸೌರ ವಿಕಿರಣವು ರಾಸಾಯನಿಕ ಕ್ರಿಯೆಗಳನ್ನು ಪ್ರಚೋದಿಸಿದ್ದು, ಓಝೋನ್ ನ ನಿರಂತರ ಸವಕಳಿಗೆ ಕಾರಣವಾಗಿದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಅಕ್ಟೋಬರ್ ಮಧ್ಯದ ನಂತರ ವಾತಾವರಣದಲ್ಲಿನ ತಾಪಮಾನವು ಏರಿಕೆಯಾಗಲು ಪ್ರಾರಂಭಿಸಿದಾಗ ರಂಧ್ರವು ಅದರ ಸಾಮಾನ್ಯ ಗಾತ್ರಕ್ಕೆ ಮರಳುವ ಸಾಧ್ಯತೆಯಿದೆ.

ಕಳೆದ ವರ್ಷ ಇದೇ ಸಮಯದಲ್ಲಿ ಓಝೋನ್ ಪದರದಲ್ಲಿ ರಂಧ್ರವು ಪತ್ತೆಯಾದ ಬಳಿಕದ ಅತ್ಯಂತ ಸಣ್ಣ ಗಾತ್ರಕ್ಕೆ ಕುಗ್ಗಿತ್ತು.

ನಾಸಾ ಪ್ರಕಾರ ಅಂದಿನ ಆ ಬೆಳವಣಿಗೆಗೆ ಅಸಹಜ ಅಂಟಾರ್ಟಿಕಾದ ಹವಾಮಾನವು ಇಂಧನ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಪ್ರಯತ್ನಗಳಿಂದ ಸಾಧ್ಯವಾಗಿದೆ.

1987 ರ ಅಂತರರಾಷ್ಟ್ರೀಯ ಮಾಂಟ್ರಿಯಲ್ ಪ್ರೋಟೋಕಾಲ್ ಅನ್ನು ನಿರಂತರವಾಗಿ ಜಾರಿಗೊಳಿಸಲು ವಿಶ್ವಸಂಸ್ಥೆ ಕರೆ ನೀಡಿದ ಬಳಿಕ ಓಝೋನ್ ಕ್ಷೀಣಿಸುವ ರಾಸಾಯನಿಕಗಳ ಹೊರಸೂಸುವಿಕೆಯನ್ನು ನಿಷೇಧಿಸಲಾಗಿತ್ತು.

ಡಬ್ಲ್ಯುಎಂಒ ಪ್ರಕಾರ, ಹ್ಯಾಲೊಕಾರ್ಬನ್‌ಗಳ ಮೇಲೆ ನಿಷೇಧವನ್ನು ಜಾರಿಗೊಳಿಸಿದಾಗಿನಿಂದ ಓಝೋನ್ ರಂಧ್ರದ ವಿಸ್ತೀರ್ಣ ಕಡಿಮೆಯಾಗುವ ಪ್ರವೃತ್ತಿಯನ್ನು ಸ್ಪಷ್ಟವಾಗಿ ತೋರಿಸಿದೆ.

ಈ ರೀತಿಯ ನಿರಂತರವಾಗಿ ನಡೆದಲ್ಲಿ ಮಾತ್ರ 2060 ರ ಹೊತ್ತಿಗೆ ಅಂಟಾರ್ಕ್ಟಿಕಾದ ಮೇಲೆ 1980 ರ ಪೂರ್ವದ ಮಟ್ಟಕ್ಕೆ ಮರಳುವ ಸಾಧ್ಯತೆಯಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *