Connect with us

LATEST NEWS

ಕೇರಳದ ತಿರುವನಂತಪುರ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಶೇಧ….

ಕೇರಳದ ತಿರುವನಂತಪುರ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ  ಭಕ್ತರ ಪ್ರವೇಶಕ್ಕೆ ನಿಶೇಧ….

ತಿರುವನಂತಪುರ, ಅಕ್ಟೋಬರ್ 09: ದೇಶದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾದ ಕೇರಳ ರಾಜ್ಯದ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಶೇಧ ಹೇರಲಾಗಿದೆ.

ದೇವಸ್ಥಾನದ ಹಲವು ಸಿಬ್ಬಂದಿಗಳಲ್ಲಿ ಹಾಗೂ ದೇವಳದ ಇಬ್ಬರು ಮುಖ್ಯ ಅರ್ಚಕರಲ್ಲಿ ಕೊರೊನಾ ಪಾಸಿಟೀವ್ ಪತ್ತೆಯಾದ ಹಿನ್ನಲೆಯಲ್ಲಿ ಈ ನಿಶೇಧ ಜಾರಿಗೆ ತರಲಾಗಿದೆ.

ಅಕ್ಟೋಬರ್ 15 ರ ವರೆಗೆ ದೇವಸ್ಥಾನಕ್ಕೆ ಭಕ್ತರ ಭೇಟಿಗೆ ಅವಕಾಶವನ್ನು ನಿರಾಕರಿಸಲಾಗಿದೆ.

ಕೇರಳದ ತಿರುವನಂತಪುರಂ ನಲ್ಲಿರುವ ಈ ದೇವಸ್ಥಾನ ಅತ್ಯಂತ ಪುರಾತನ ಕ್ಷೇತ್ರಗಳಲ್ಲಿ ಒಂದಾಗಿದ್ದು, ಇಲ್ಲಿನ ಚಿನ್ನಾಭರಣಗಳ ಕೊಠಡಿಗಳ ವಿಚಾರ ಇಡೀ ವಿಶ್ವದ ಗಮನ ಸೆಳೆದಿತ್ತು.

ಕೋವಿಡ್ ಅನ್ ಲಾಕ್ ಮಾರ್ಗಸೂಚಿ ಜಾರಿಗೆ ಬಂದ ಬಳಿಕ ಕೇರಳ ಸರಕಾರ ಈ ದೇವಸ್ಥಾನದ ಒಳಗೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು.

ಆದರೆ ಇದೀಗ ದೇವಸ್ಥಾನದ ಅರ್ಚಕರಲ್ಲೇ ಕೊರೊನಾ ಪತ್ತೆಯಾದ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.