Connect with us

    LATEST NEWS

    ಓಯೋʼ ಸ್ಥಾಪಕ, ರಿತೇಶ್ ಅಗರ್ವಾಲ್ ವಿವಾಹ: ಉದ್ಯಮಿಗಳು ಭಾಗಿ

    ದೆಹಲಿ, ಮಾರ್ಚ್ 08: 19 ನೇ ವಯಸ್ಸಿನಲ್ಲಿ ಕಾಲೇಜು ಬಿಟ್ಟು ʼಓಯೋʼ ಹೊಟೇಲ್‌ & ರೂಮ್ಸ್‌ ಸ್ಥಾಪಿಸಿ ಕೋಟ್ಯಧಿಪತಿ ಆದ ರಿತೇಶ್ ಅಗರ್ವಾಲ್ ಅವರ ಆರತಕ್ಷತೆ ಸಮಾರಂಭ ಮಂಗಳವಾರ ( ಮಾ. 7 ರಂದು) ಹತ್ತಾರು ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದೆ.

    ಸಣ್ಣ ವಯಸ್ಸಿನಲ್ಲೇ ಯಶಸ್ವಿ ಉದ್ಯಮಿಯಾಗಿ ಬೆಳೆದಿರುವ ರಿತೇಶ್ ಅಗರ್ವಾಲ್ ಇಂದು ಜಗತ್ತಿನ ನಾನಾ ಕಡೆಗಳಲ್ಲಿ ʼಓಯೋʼ ಹೊಟೇಲ್‌ & ರೂಮ್ಸ್‌ ಸ್ಥಾಪಿಸಿ ಸ್ಟಾರ್ಟಪ್ ಲೋಕದಲ್ಲಿ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ದೆಹಲಿಯ ಫೈವ್‌ ಸ್ಟಾರ್‌ ಹೊಟೇಲ್‌ ವೊಂದರಲ್ಲಿ ರಿತೇಶ್‌ ಹಾಗೂ ಗೀತಾಂಶ ಸೂದ್ ಅವರ ಆರತಕ್ಷತೆ ಸಮಾರಂಭ ನಡೆದಿದೆ.

    ಈ ಕಾರ್ಯಕ್ರಮದಲ್ಲಿ ಶ್ರೀಮಂತ ಕಂಪೆನಿಗಳಲ್ಲಿ ಒಂದಾಗಿರುವ ʼಸಾಫ್ಟ್‌ ಬ್ಯಾಂಕ್‌ʼ ಸಿಇಒ, ಖ್ಯಾತ ಉದ್ಯಮಿ ಮಸಯೋಶಿ ಸನ್‌ ಭಾಗಿಯಾಗಿದ್ದಾರೆ. ಇದರೊಂದಿಗೆ ಪೇಟಿಎಂ ಸ್ಥಾಪಕ ವಿಜಯ್‌ ಶೇಖರ್‌ ಶರ್ಮಾ, ಲೆನ್ಸ್‌ಕಾರ್ಟ್‌ನ ಪೆಯೂಶ್ ಬನ್ಸಾಲ್ ಇನ್ನು ಅನೇಕ ಉದ್ಯಮಿಗಳು, ಗಣ್ಯ ವ್ಯಕ್ತಿಗಳು ಮದುವೆಯಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭಕೋರಿದ್ದಾರೆ.

    ಸೋಶಿಯಲ್‌ ಮೀಡಿಯಾದಲ್ಲಿ ವಿವಾಹದ ಫೋಟೋಗಳು ವೈರಲ್‌ ಆಗಿದೆ. ಒಡಿಶಾ ಮೂಲದ ರಿತೇಶ್‌ ʼಓಯೋʼ ದಿಂದ ಇಂದು ಯಶಸ್ವಿ ಉದ್ಯಮಿಯಾಗಿದ್ದಾರೆ. 800 ಕ್ಕೂ ಹೆಚ್ಚಿನ ನಗರದಲ್ಲಿ ʼಓಯೋʼ ಕಾರ್ಯ ನಿರ್ವಹಿಸುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply