LATEST NEWS
ನವಭಾರತ್ ಸರ್ಕಲ್ ನಲ್ಲಿ ಕಾರು ಚಾಲಕನ ಅತೀವೇಗಕ್ಕೆ ಸರಣಿ ಅಪಘಾತ ಇಬ್ಬರಿಗೆ ಗಂಭೀರ ಗಾಯ

ನವಭಾರತ್ ಸರ್ಕಲ್ ನಲ್ಲಿ ಕಾರು ಚಾಲಕನ ಅತೀವೇಗಕ್ಕೆ ಸರಣಿ ಅಪಘಾತ ಇಬ್ಬರಿಗೆ ಗಂಭೀರ ಗಾಯ
ಮಂಗಳೂರು ನವೆಂಬರ್ 11: ನಗರದೊಳಗೆ ಕಾರನ್ನು ಯದ್ವಾತದ್ವಾ ವೇಗವಾಗಿ ಓಡಿಸಿ ಸರಣಿ ಅಪಘಾತ ನಡೆದ ಘಟನೆ ಕೊಡಿಯಾಲ್ ಬೈಲ್ ನವಭಾರತ್ ಸರ್ಕಲ್ ಬಳಿ ನಡೆದಿದೆ. ಈ ಸರಣಿ ಅಪಘಾತದಲ್ಲಿ ಓರ್ವ ಪಾದಚಾರಿ ಹಾಗೂ ಪಾನಿಪೂರಿ ಅಂಗಡಿಯ ಹುಡುಗನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ನಗರದ ನವಭಾರತ್ ಸರ್ಕಲ್ ಪೆಟ್ರೋಲ್ ಪಂಪ್ ಬಳಿ ಈ ಘಟನೆ ನಡೆದಿದ್ದು, ಮಹಾರಾಷ್ಟ್ರ ನೋಂದಣಿಯ ಐ20 ಕಾರೊಂದು ಏಕಾಏಕಿ ಒಂದೇ ಸಮನೆ ವೇಗದಲ್ಲಿ ಬಂದು ಪಾದಚಾರಿ ಯುವಕನೊಬ್ಬನಿಗೆ ಡಿಕ್ಕಿ ಹೊಡೆದಿದ್ದು ಮಾತ್ರವಲ್ಲದೇ ಪೆಟ್ರೋಲ್ ಪಂಪ್ ಬಳಿ ಇದ್ದ ಕಾರು, ಹಾಗೂ ಪಾನಿಪುರಿ ಅಂಗಡಿ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಯುವಕ ಹಾಗೂ ಪಾನಿಪುರಿ ಅಂಗಡಿಯ ಹುಡುಗನೊಬ್ಬ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ಹೊಡೆದ ಪರಿಣಾಮ ನಿಲ್ಲಿಸಿದ್ದ ಕಾರೊಂದು ಜಖಂ ಆಗಿದ್ದು, ಪಾನಿಪುರಿ ಅಂಗಡಿಗೂ ಹಾನಿಯಾಗಿದೆ. ನಗರದೊಳಗೆ ಈ ರೀತಿಯಾಗಿ ವೇಗವಾಗಿ ಮುನ್ನುಗ್ಗಿ ಹೋಗಿ ಅವಾಂತರ ಸೃಷ್ಟಿಸಿದ ಮಹಾರಾಷ್ಟ್ರ ನೋಂದಣಿಯ ಐ20 ಕಾರು ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.