LATEST NEWS
ನೈಜೀರಿಯಾ – ತೈಲ ಟ್ಯಾಂಕರ್ ಸ್ಪೋಟ – 147 ಮಂದಿ ಸಾವು
ಉತ್ತರ ನೈಜಿರಿಯಾ ಅಕ್ಟೋಬರ್ 17: ತೈಲ ಟ್ಯಾಂಕರ್ ಒಂದು ಪಲ್ಟಿಯಾಗಿದ್ದು ವೇಳೆ ಚರಂಡಿಯಲ್ಲಿದ್ದ ತೈಲ ತೆಗೆದುಕೊಳ್ಳುತ್ತಿದ್ದಾಗ ಟ್ಯಾಂಕರ್ ಸ್ಪೋಟಗೊಂಡ ಪರಿಣಾಮ 147 ಮಂದಿ ಸಾವನಪ್ಪಿದ ಘಟನೆ ಜಿಗಾವಾ ರಾಜ್ಯದ ಮಜಿಯಾ ಎಂಬ ಹಳ್ಳಿಯಲ್ಲಿ ನಡೆದಿದೆ.
ಇಲ್ಲಿ ತಡರಾತ್ರಿ ತೈಲ ವಾಹನ ಅಪಘಾತಕ್ಕೀಡಾಗಿತ್ತು. ಸ್ಥಳೀಯರು ಇಂಧನವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಗ ಸ್ಫೋಟವು ಸಂಭವಿಸಿದೆ. ಸುಮಾರು 147 ಮಂದಿ ಸಾವನಪ್ಪಿ 70 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿತ್ತು. ಒಳಚರಂಡಿ ಕಂದಕಕ್ಕೆ ಇಂಧನ ಚೆಲ್ಲಿತ್ತು. ಸ್ಥಳೀಯ ನಿವಾಸಿಗಳು ಇಂಧನ ತೆಗೆದುಕೊಳ್ಳುತ್ತಿದ್ದಾಗ ಟ್ಯಾಂಕರ್ ಸ್ಫೋಟಗೊಂಡಿದೆ ಎಂದು ಜಿಗಾವಾ ಪೊಲೀಸ್ ವಕ್ತಾರ ಶಿಸು ಲಾವನ್ ಆಡಮ್ ಹೇಳಿದ್ದಾರೆ. ನೈಜೀರಿಯಾದ ಉಪಾಧ್ಯಕ್ಷ ಕಾಶಿಮ್ ಶೆಟ್ಟಿಮಾ ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದಾರೆ. ಈ ದುರ್ಘಟನೆಯು ನಮ್ಮೆಲ್ಲರ ಹೃದಯ ಛಿದ್ರಗೊಳಿಸಿದೆ. ಫೆಡರಲ್ ಸರ್ಕಾರವು ಜಿಗವಾ ಜನರೊಂದಿಗೆ ನಿಂತಿದೆ. ಗಾಯಗೊಂಡವರಿಗೆ ನೆರವಾಗಲು ಮತ್ತು ಈ ವಿಪತ್ತಿನಿಂದ ಪೀಡಿತ ಕುಟುಂಬಗಳಿಗೆ ಸಹಾಯ ಮಾಡಲು ನಾವು ಎಲ್ಲಾ ಅಗತ್ಯ ಸಂಪನ್ಮೂಲಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.