LATEST NEWS
ಬೆಡ್ ರೂಮ್ ಸೀನ್ ಗಳ ಮಾದಕತೆಯ ಫೋಟೋಶೂಟ್ , ಟ್ರೊಲ್ ಗೆ ಈಡಾದ ನವದಂಪತಿ…!
ತಿರುವನಂತಪುರಂ,ಅಕ್ಟೋಬರ್ 17: ಮದುವೆಗೂ ಮುನ್ನ ಅಥವಾ ನಂತರ, ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್ ಫೋಟೋಶೂಟ್ ಮಾಡೋದು ಸಾಮಾನ್ಯ . ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್ ಫೋಟೋಗಳು ತುಂಬಾ ವಿಭಿನ್ನವಾಗಿರಬೇಕು ಎಂಬ ಕನಸನ್ನು ಹೊಂದಿರುತ್ತಾರೆ. ಹೀಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಮುಂದಾದ ಕೇರಳ ಜೋಡಿ ಇದೀಗ ಟ್ರೋಲಿಗರ ದಾಳಕ್ಕೆ ಸಿಲುಕಿದ್ದಾರೆ.
ಈ ನವಜೋಡಿ ರಿಷಿ ಕಾರ್ತಿಕೇಯನ್ ಮತ್ತು ಲಕ್ಷ್ಮೀ ಸೆ. 16ರಂದು ಮದುವೆಯಾಗಿದ್ದಾರೆ. ಕರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರಳವಾಗಿ ವಿವಾಹ ಸಮಾರಂಭ ಜರುಗಿದೆ. ಅಲ್ಲದೆ, ಮದುವೆಗೂ ಮುನ್ನ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಚೌಡರಿ ಸೆಷನ್ (ಮಾದಕ ಫೋಟೋಶೂಟ್) ಎಂಬ ವಿಭಿನ್ನ ಕಲ್ಪನೆಯೊಂದಿಗೆ ದಂಪತಿ ಪೋಸ್ಟ್ ವೆಡ್ಡಿಂಗ್ ಪೋಟೋಶೂಟ್ ಮಾಡಿದ್ದಾರೆ. ಇದರಲ್ಲಿ ದಂಪತಿ ಅರ್ಧಂಬರ್ಧ ಉಡುಪು ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ, ಇದೇ ಫೋಟೋಶೂಟ್ ಇದೀಗ ಆಹಾರವಾಗಿದ್ದಾರೆ.
ತಮ್ಮ ಫೋಟೋಗ್ರಾಫರ್ ಸ್ನೇಹಿತ ಅಖಿಲ್ ಕಾರ್ತಿಕೇಯನ್ ನೆರವಿನಿಂದ ದಂಪತಿ ಕೇರಳದ ಇಡುಕ್ಕಿ ಜಿಲ್ಲೆಯ ವ್ಯಾಗಮೋನ್ ಟೀ ಎಸ್ಟೇಟ್‌ನಲ್ಲಿ ಸುಂದರ ಫೋಟೊಶೂಟ್ ಮಾಡಿಸಿದ್ದಾರೆ. ಹನಿಮೂನ್ ಹಿನ್ನೆಲೆಯಲ್ಲಿ ದಂಪತಿ ಕಳೆದ ವಾರ ಇಡುಕ್ಕಿ ತೆರಳಿದ್ದಾಗ ಇದರ ನಡುವೆಯೇ ಫೋಟೋಶೂಟ್ ನಡೆದಿದೆ.
ಇದೇ ಖುಷಿಯಲ್ಲೇ ದಂಪತಿ ತಮ್ಮ ಫೇಸ್‌ಬುಕ್‌ನಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ಸಾಕಷ್ಟು ಅಶ್ಲೀಲ ಕಾಮೆಂಟ್‌ಗಳು ಹರಿದುಬಂದಿವೆ. ಕೆಲವೇ ಮಂದಿ ದಂಪತಿ ಫೋಟೋಗಳನ್ನು ಮೆಚ್ಚಿಕೊಂಡರೆ, ಬಹುತೇಕರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಫೋಟೋಶೂಟ್ ಮಾಡಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂಬಿತ್ಯಾದಿ ಟೀಕೆಗಳು ದಂಪತಿ ವಿರುದ್ಧ ಕೇಳಿಬಂದಿದೆ.
ಟ್ರೋಲಿಗರ ಕಾಮೆಂಟ್ ವಿರುದ್ಧ ಸಿಡಿದೆದ್ದ ದಂಪತಿ, ನಿಮ್ಮ ಫೋಟೋ, ನಮ್ಮಿಷ್ಟ ನೀವ್ಯಾರು ಕೇಳುವುದಕ್ಕೆ ಎಂದಿದ್ದಾರೆ. ಈ ರೀತಿ ಫೋಟೋಶೂಟ್ ಮಾಡಿಸಲು ನಮ್ಮ ಮನೆಯವರೇ ನಮ್ಮನ್ನು ವಿರೋಧಿಸಲಿಲ್ಲ ಎಂದು ಸಮರ್ಥನೆಯನ್ನು ನೀಡಿದ್ದಾರೆ.
ತುಂಡುಡುಗೆ ಧರಿಸುವುದು ಅಶ್ಲೀಲವೇನು ಅಲ್ಲ. ತುಂಬಾ ಅಸಹ್ಯ ಎನಿಸುವ ಕಾಮೆಂಟ್‌ಗಳು ಬಂದವು. ಆರಂಭದಲ್ಲಿ ಕೆಲವೊಂದಕ್ಕೆ ಉತ್ತರ ನೀಡಿದೆವು. ಆದರೆ, ರಾಶಿ ರಾಶಿ ಕಾಮೆಂಟ್‌ಗಳು ಬರಲು ಆರಂಭಿಸಿತು. ಫೋಟೋಗಳು ವೈರಲ್ ಆಗುತ್ತಿದ್ದಂತೆ ಟ್ರೋಲ್ ಮಾಡಲಾರಂಭಿಸಿದರು. ಬಳಿಕ ನಾವು ಗಂಭೀರವಾಗಿ ತೆಗೆದುಕೊಳ್ಳದೇ ಎಲ್ಲವನ್ನು ಕಡೆಗಣಿಸಿದ ಎಂದು ದಂಪತಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.