UDUPI
ಉದ್ಯೋಗಾವಕಾಶ ಸೃಷ್ಠಿ ವ್ಯವಸ್ಥೆಯ ಹೊಣೆ – ಪ್ರಮೋದ್ ಮಧ್ವರಾಜ್
ಉದ್ಯೋಗಾವಕಾಶ ಸೃಷ್ಠಿ ವ್ಯವಸ್ಥೆಯ ಹೊಣೆ – ಪ್ರಮೋದ್ ಮಧ್ವರಾಜ್
ಉಡುಪಿ ಜನವರಿ 30: ಶಿಕ್ಷಣ ಪಡೆದ ಯುವಕರಿಗೆ ಉದ್ಯೋಗವಕಾಶ ಸೃಷ್ಟಿ ವ್ಯವಸ್ಥೆಯ ಹೊಣೆ ಎಂದು ಮೀನುಗಾರಿಕೆ, ಯುವಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಹೇಳಿದರು.
ಅವರು ಇಂದು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇವರ ಆಶ್ರಯದಲ್ಲಿ ನಡೆದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕವಾಗಿ ರಾಜ್ಯದಲ್ಲಿ ಉಡುಪಿ ಜಿಲ್ಲೆ ಮುಂದಿದ್ದು, ಫಲಿತಾಂಶಗಳಲ್ಲಿ ಪ್ರಥಮ ಸ್ಥಾನವನ್ನೇ ಪಡೆಯುತ್ತಿದೆ. ಶೈಕ್ಷಣಿಕ ಪ್ರಗತಿಗೆ ಅನುಗುಣವಾಗಿ ನಮ್ಮ ಜಿಲ್ಲೆಯಲ್ಲಿ ಇರುವ .ಶಿಕ್ಷಿತ ಯುವಕರ ಉತ್ಪಾದನೆ ಹೆಚ್ಚಾದಾಗ ಅವರಿಗೆ ಅವಕಾಶಗಳು ಹೆಚ್ಚಾಗಬೇಕು. ಹೆಚ್ಚಿನ ವಿದ್ಯಾರ್ಥಿಗಳ ಹೆತ್ತವರು ಬ್ಯಾಂಕ್‍ಗಳ ಮೂಲಕ ಸಾಲ ಮಾಡಿ ಶಿಕ್ಷಣ ನೀಡಿರುತ್ತಾರೆ. ಆದರೆ ಉದ್ಯೋಗ ಅಲಭ್ಯತೆ ಯುವಕರಲ್ಲಿ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ಸ್ವದ್ಯೋಗಕ್ಕೆ ಪೂರಕ ಕ್ರಮಗಳು, ಅವಕಾಶಗಳ ಸದ್ಬಳಕೆ, ಸ್ಪರ್ಧಾ ಪರೀಕ್ಷೆಗಳಲ್ಲಿ ಪಾಸಾಗುವ ಕುರಿತು ಕಾರ್ಯಾಗಾರ,ಕೌಶಲ್ಯ ತರಬೇತಿಗಳಾಗಬೇಕೆಂದು ಸಚಿವರು ಅಭಿಪ್ರಾಯಿಸಿದರು.