Connect with us

    UDUPI

    ಹೆಲ್ಮೆಟ್ ರಹಿತ ಅಪಘಾತಕ್ಕೆ ಪರಿಹಾರವಿಲ್ಲ

    ಹೆಲ್ಮೆಟ್ ರಹಿತ ಅಪಘಾತಕ್ಕೆ ಪರಿಹಾರವಿಲ್ಲ

    ಉಡುಪಿ ಫೆಬ್ರವರಿ 1: ಇನ್ನು ಮುಂದೆ ಹೆಲ್ಮೆಟ್ ಧರಿಸದೆ ಅಪಘಾತವಾದಲ್ಲಿ ಅವರಿಗೆ ಸಿಗುವ ಇನ್ಸೂರೆನ್ಸ್ ಪರಿಹಾರ ನೀಡಲಾಗುವುದಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಹೇಳಿದರು.

    ಅವರು ಇಂದು ಉಡುಪಿ ಕುಂಜಿಬೆಟ್ಟಿನ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಆಂದೋಲನದ ಸಭಾ ಕಾರ್ಯಕ್ರಮ ಉದ್ಘಾಟನೆಯನ್ನು ನಡೆಸಿ ಮಾತನಾಡಿದರು.

    ಇಂದಿನ ದಿನಗಳಲ್ಲಿ ಪ್ರಜ್ಞಾವಂತೆರೇ ತಮ್ಮ ಜೀವನದ ಬಗ್ಗೆ ಯೋಜಿಸದೆ ಶೋಕಿಗಾಗಿ ಹೆಲ್ಮೆಟ್ ಧರಿಸದೆ ದ್ವಿಚಕ್ರವಾಹನವನ್ನು ಓಡಿಸುತ್ತಾರೆ. ದೇಶದಲ್ಲಿ ವರ್ಷದಲ್ಲಿ 900 ಜನ ಹೆಲ್ಮೆಟ್ ಧರಿಸದೇ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ.

    ಪೋಲಿಸರ ಭಯಕ್ಕೆ ಹೆಲ್ಮೆಟನ್ನು ಧರಿಸದೆ ತಮ್ಮ ಜೀವದ ರಕ್ಷಣೆಗಾಗಿ ಧರಿಸಬೇಕು. ಒಂದು ವೇಳೆ ಅಪಘಾತವಾದಲ್ಲಿ ಹೆಲ್ಮೆಟ್ ಧರಿಸದೆ ಅವಘಡ ಸಂಭವಿಸಿದರೆ ಇನ್ಸೂರೆನ್ಸ್‍ನ್ನು ನೀಡಲಾಗುವುದಿಲ್ಲ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply