Connect with us

  LATEST NEWS

  ಮುಂಬೈ ಕನ್ನಡಿಗ ದಯಾ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ, 8 ಅಕ್ರಮ ಪಿಸ್ತೂಲ್, ಗುಂಡುಗಳು ವಶ, ಮೂವರ ಬಂಧನ..!

  ಮುಂಬೈ: ಮಹತ್ವದ ಕಾರ್ಯಾಚರಣೆ ನಡೆಸಿದ್ದ ಮುಂಬೈ  ಕ್ರೈಂ ಬ್ರಾಂಚ್ ಅಕ್ರಮ ಪಿಸ್ತೂಲ್ ಹೊಂದಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

  ಕನ್ನಡಿಗ ದಯಾ ನಾಯಕ್ ನೇತೃತ್ವದ ಬಾಂದ್ರ ಕ್ರೈಮ್ ಬ್ರಾಂಚ್ ನಗರದ ವಿಲೆ ಪಾರ್ಲೆಯಲ್ಲಿ ಈ ಕಾರ್ಯಾಚರಣೆ ನಡೆಸಿದೆ. ಉತ್ತರ ಪ್ರದೇಶದ ಮಿತೈಲಾಲ್ ಗುಲಾಬ್ ಚೌಧರಿ, ಮುಂಬೈಯ ದಾವಲ್ ಚಂದ್ರಪ್ಪ ದೇವರಮನಿ, ಪುಷ್ಪಕ ಜಗದೀಶ್ ಮದ್ವಿ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳ ಬಳಿ ಇದ್ದ ಒಟ್ಟು 8 ಅತ್ಯಾಧುನಿಕ ಅಕ್ರಮ ಪಿಸ್ತೂಲ್ ಮತ್ತು 138 ಜೀವಂತ ಕಾಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಳಿ ಇನ್ನೂ ಅನೇಕ ಶಸ್ತ್ರಾಸ್ರಗಳಿರುವ ಮಾಹಿತಿ ಇದ್ದು ಈ ಬಗ್ಗೆ ತನಿಖೆ ಮುಂದುವರೆದಿದೆ.

   

  Share Information
  Advertisement
  Click to comment

  You must be logged in to post a comment Login

  Leave a Reply