LATEST NEWS
ಮಂಗಳೂರು ಪೊಲೀಸರ ಅಪರೇಶನ್ ಗಾಂಜಾ

ಮಂಗಳೂರು ಪೊಲೀಸರ ಅಪರೇಶನ್ ಗಾಂಜಾ
ಮಂಗಳೂರು ಅಕ್ಚೋಬರ್ 29: ಮಂಗಳೂರಿನಲ್ಲಿ ಅಪರೇಶನ್ ಗಾಂಜಾ ಮುಂದುವರೆದಿದೆ. ಇಂದು ಪೊಲೀಸರು ಮತ್ತೆ ಗಾಂಜಾ ಸೇವನೆ ಆರೋಪದಡಿ 7 ಮಂದಿಯನ್ನು ಬಂಧಿಸಿದ್ದಾರೆ. 3 ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳು ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದರು.
ನಗರದ ಕೊಡಿಕಲ್ ಮೈದಾನದ ಬಳಿ ಯುವಕರು ಗಾಂಜಾ ಸೇದುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿ ಮಂಗಳೂರು ರೌಡಿ ನಿಗ್ರಹದಳ 7 ಮಂದಿ ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ವೆಲೆನ್ಸಿಯಾ ನಿವಾಸಿ ಮಹಮ್ಮದ್ ರಮ್ಲಾನ್ (22), ಮಾರ್ನಮಿಕಟ್ಟೆ ನಿವಾಸಿ ಅಂಕಿತ್ ಶೆಟ್ಟಿ (25), ಜೆಪ್ಪು ನಿವಾಸಿ ಗಣೇಶ್ ಪೂಜಾರಿ (24), ಕೊಟ್ಟಾರ ಚೌಕಿ ನಿವಾಸಿಗಳಾದ ಪ್ರವೀಣ್(25) ರಂಜಿತ್ ದೇವಾಡಿಗ (21),ಕದ್ರಿ ನಿವಾಸಿಗಳಾದ ಶುಭಂ (23) ಹಾಗೂ ಶಾನ್ ರೋಡ್ರಿಗಸ್(19) ಎಂದು ಗುರುತಿಸಲಾಗಿದೆ .