LATEST NEWS
ಹೊರ ರಾಜ್ಯದವರಿಗೆ ಇನ್ನು ಕೇವಲ 7 ದಿನ ಮಾತ್ರ ಸರಕಾರಿ ಕ್ವಾರಂಟೈನ್
ಹೊರ ರಾಜ್ಯದವರಿಗೆ ಇನ್ನು ಕೇವಲ 7 ದಿನ ಮಾತ್ರ ಸರಕಾರಿ ಕ್ವಾರಂಟೈನ್
ಉಡುಪಿ ಮೇ.28: ಇನ್ನು ಉಡುಪಿಯಲ್ಲಿ ಹೊರ ರಾಜ್ಯದಿಂದ ಬಂದವರಿಗೆ ಕೇವಲ 7 ದಿನ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ. ಈಗಾಗಲೇ ಉಡುಪಿಯಲ್ಲಿ ಹೊರ ರಾಜ್ಯಗಳಿಂದ ಆಗಮಿಸಿದ ಜನರಿಂದ ಕೊರೊನಾ ಪ್ರಕರಣಗಳು 150ರ ಗಡಿಯಲ್ಲಿದೆ. ಈ ನಡುವೆ ರಾಜ್ಯ ಸರಕಾರ ಕ್ವಾರಂಟೈನ್ ಅವಧಿಯನ್ನು ಸಡಿಲಗೊಳಿಸಿದೆ.
ಈ ಹಿನ್ನಲೆ ಉಡುಪಿಯಲ್ಲೂ ಕ್ವಾರಂಟೈನ್ ಅವಧಿಯನ್ನು ಕಡಿಮೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದು, ಹೊರ ರಾಜ್ಯಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಿದರೆ 7 ದಿನ ಮಾತ್ರ ಸರಕಾರಿ ಕ್ವಾರಂಟೈನ್ ಇದ್ದು, ಮತ್ತೆ 7 ದಿನ ಹೋಮ್ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ.
ಈ 14 ದಿನಗಳ ಕಾಲ ಭಾರಿ ಏಚ್ಚರಿಕೆಯಿಂದ ಇರಬೇಕಾಗಿದ್ದು, ಕೊರೊನಾ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ಕೊಡಬೇಕು ಅಲ್ಲದೆ ಆ್ಯಪ್ ನ ಮೂಲಕ ಎಲ್ಲರ ಮೇಲೆ ನಿಗಾ ಇಡಲಾಗುವುದು, ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಅವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಹೊರ ರಾಜ್ಯಗಳಿಂದ ಆಗಮಿಸಿದ ಸುಮಾರು 5200 ಮಂದಿಯನ್ನು ಕ್ವಾರಂಟೈನ್ ನಿಂದ ಬಿಡುಗಡೆ ಮಾಡಲಾಗಿದೆ.