Connect with us

    LATEST NEWS

    ಆನ್‌ಲೈನ್ ರಮ್ಮಿ ನಿಷೇಧ…!?

    ಚೆನ್ನೈ, ನವೆಂಬರ್ 06: ಆನ್‌ಲೈನ್ ಜೂಜು ಎನಿಸಿಕೊಂಡಿರುವ ಎಲ್ಲ ಗೇಮ್‌ಗಳನ್ನೂ ತಮಿಳುನಾಡು ಸರ್ಕಾರ ನಿಷೇಧಿಸಲು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಕೊಯಮತ್ತೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಆನ್‌ಲೈನ್ ರಮ್ಮಿ ಆಡಿ, ಆ ಜೂಜಿನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಸರ್ಕಾರದ ಗಮನದಲ್ಲಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ರಚಿಸಲಾಗುತ್ತಿದೆ. ಇದರ ಪ್ರಕಾರ, ಈ ಆಟದಲ್ಲಿ ಭಾಗಿಯಾಗುವವರನ್ನು ಅಪರಾಧಿಗಳೆಂದು ಪರಿಗಣಿಸಿ ಅವರಿಗೆ ಜೈಲು ಶಿಕ್ಷೆ ವಿಧಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಈ ಆಟ ನಿಷೇಧಿಸಬೇಕು ಎಂದು ಸಾರ್ವಜನಿಕ ವಲಯದಿಂದ ಸಾಕಷ್ಟು ಮನವಿಗಳು ಬಂದಿವೆ. ಇದನ್ನು ಸರ್ಕಾರ ಪರಿಗಣಿಸಿದೆ ಎಂದು ಸಿಎಂ ಪಳನಿಸ್ವಾಮಿ ಹೇಳಿದ್ದಾರೆ.

    ಇಂಟರ್‌ನೆಟ್ ಬಳಕೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದೆ. ಇದರ ಸಮರ್ಪಕ ಬಳಕೆಯ ಅರಿವಿಲ್ಲದೆ ವಿಶೇಷವಾಗಿ ಯುವಕರು ತಮ್ಮ ಬಾಳನ್ನು ಹಾಳುಮಾಡಿಕೊಳ್ಳತೊಡಗಿದ್ದಾರೆ. ಆನ್‌ಲೈನ್ ರಮ್ಮಿ ಮುಂತಾದ ಗೇಮ್ಸ್ ಮನಸೆಳೆಯವಂತೆ ಇದ್ದು, ಅದು ಬದುಕನ್ನೇ ಹಾಳು ಮಾಡಿ ಆತ್ಮಹತ್ಯೆಗೆ ಕಾರಣವಾಗುತ್ತಿದೆ ಎಂದು ಪಳನಿಸ್ವಾಮಿ ಕಳವಳ ವ್ಯಕ್ತಪಡಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *