LATEST NEWS
ಟೊಮೆಟೋ ಹಾದಿಯಲ್ಲಿ ಈರುಳ್ಳಿ – ದೀಪಾವಳಿ ವೇಳೆಗೆ ಶತಕ ಗ್ಯಾರಂಟಿ

ಉಡುಪಿ ಅಕ್ಟೋಬರ್ 03: ಟೋಮಾಟೋ ಬಳಿಕ ಇದೀಗ ಈರುಳ್ಳಿ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದ್ದು, ಒಂದೇ ವಾರದಲ್ಲಿ ದರ ಡಬಲ್ ಆಗಿದ್ದು, ಇದೀಗ ಶತಕದತ್ತ ಮುನ್ನುಗ್ಗುತ್ತಿದೆ. ಕಳೆದ ವಾರ ಕೆ.ಜಿಗೆ ₹40 ರಿಂದ ₹50ಕ್ಕೆ ಮಾರಾಟವಾಗುತ್ತಿದ್ದ ಈರುಳ್ಳಿ ಪ್ರಸ್ತುತ ₹75ರಿಂದ ₹80ಕ್ಕೆ ಏರಿಕೆಯಾಗಿದೆ
ಮಳೆ ಅಭಾವ ಅಲ್ಲದೆ ಕೆಲಲು ಪ್ರದೇಶಗಲ್ಲಿ ಮಳೆ ಅಬ್ಬರಕ್ಕೆ ಈರುಳ್ಳಿ ಬೆಳೆ ನಾಶವಾಗಿರುವುದು ಈರುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಕರಾವಳಿ ಜಿಲ್ಲೆಗೆ ಹೊರ ಜಿಲ್ಲೆ ಹಾಗೂ ಮಹಾರಾಷ್ಟ್ರದಿಂದ ಈರುಳ್ಳಿ ಪೂರೈಕೆಯಾಗುತ್ತದೆ. ವಾರದಿಂದ ಈಚೆಗೆ ಈರುಳ್ಳಿಗೆ ವಿಪರೀತ ಬೇಡಿಕೆ ಹೆಚ್ಚಾಗಿದ್ದು ಪೂರೈಕೆ ಕಡಿಮೆಯಾಗಿರುವುದರಿಂದ ದರ ಏರಿಕೆಯಾಗಿದೆ. ರಾಜ್ಯದಲ್ಲಿಆಗಸ್ಟ್-ಸಪ್ಟೆಂಬರ್‌ನಲ್ಲಿ ಸ್ವಲ್ಪ ಪ್ರಮಾಣ ಮಳೆ ಆಗಿದ್ದರಿಂದ ರೈತರು ಅಧಿಕ ಪ್ರಮಾಣದಲ್ಲಿ ಈರಳ್ಳಿ ಬೆಳೆ ಬೆಳೆದಿಲ್ಲ. ಇದರಿಂದ ಈರುಳ್ಳಿ ಇಳುವರಿ ಕ್ಷೀಣಿಸಿದೆ. ಈ ಕಾರಣಕ್ಕೆ ಈರುಳ್ಳಿ ಬೆಲೆ ದಿನೇದಿನೇ ಗಗನಕ್ಕೇರುತ್ತಿದೆ. ದೊಡ್ಡ ಗಾತ್ರದ ಗಡ್ಡೆ ಕೆಜಿಗೆ ರೂ.40, ಮಧ್ಯಮ ಗಾತ್ರದ ರೂ.30 ಹಾಗೂ ಸಾಮಾನ್ಯ ಗಾತ್ರದ ಸಣ್ಣ ಗಡ್ಡೆಗೆ ರೂ.20ರಿಂದ 25 ರೂ.ಕೆಜಿಯಂತೆ ಮಾರಾಟವಾಗುತ್ತಿದ್ದ ಈರುಳ್ಳಿ ಈಗ ದಿಢೀರ್ ಆಗಿ ರೂ.100 ಕೆಜಿ ಮಾರಾಟವಾಗುತ್ತಿದೆ.

ಸದ್ಯಕ್ಕೆ ಈರುಳ್ಳಿ ದರ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಶೀಘ್ರ ಶತಕದ ಗಡಿ ದಾಟಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ವ್ಯಾಪಾರಿಗಳು. ಹೋಟೆಲ್ ಉದ್ಯಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿರುವುದರಿಂದ ದರ ಏರಿಕೆ ಬಿಸಿ ಗ್ರಾಹಕರಿಗೂ ತಟ್ಟುವ ಸಾಧ್ಯತೆಗಳು ಹೆಚ್ಚಾಗಿವೆ. ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆ, ಈರುಳ್ಳಿ ಕರಿ, ಈರುಳ್ಳಿ ಬಜ್ಜಿಯ ದರವೂ ಹೆಚ್ಚಾಗಬಹುದು. ದೀಪಾವಳಿ ಸಂದರ್ಭದಲ್ಲೇ ಈರುಳ್ಳಿ ಬೆಲೆ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ಸಂಕಷ್ಟ ತಂದೊಡ್ಡಿದೆ.