Connect with us

KARNATAKA

ಕೋಚಿಂಗ್ ಇಲ್ಲದೆ UPSC ಪರೀಕ್ಷೆ ಪಾಸ್ ಮಾಡಿದ ಉಡುಪಿಯ ನಿವೇದಿತಾ ಶೆಟ್ಟಿ ಗೆ ಪ್ರಶಂಸೆಗಳ ಮಹಾಪೂರ..!

ಉಡುಪಿ : UPSC ಪರೀಕ್ಷೆಯಲ್ಲಿ ಯಾವುದೇ ಕೋಚಿಂಗ್ ಇಲ್ಲದೆ ಉಡುಪಿ ಜಿಲ್ಲೆ ನಿವೇದಿತಾ ಶೆಟ್ಟಿ ಉತ್ತೀರ್ಣರಾಗಿ ದಾಖಲೆ ನಿರ್ಮಿಸಿದ್ದು ಛಲಗಾರ್ತಿಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ.

UPSC 2022ರ ಸಿವಿಲ್ ಸರ್ವಿಸಸ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಭಾರಿ ಪೂರ್ವಭಾವಿ ತಯಾರಿಯೊಂದಿಗೆ ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆದ್ರೂ, ಪಾಸ್ ಆಗುವುದು ಕೇವಲ ಸಾವಿರದಲ್ಲಿ ಮಾತ್ರ. ಈ ಬಾರಿ 11 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ ಆದ್ರೆ ಕೇವಲ 1022 ಅಭ್ಯರ್ಥಿಗಳು ಮಾತ್ರ ಆಯ್ಕೆಗೊಂಡಿದ್ದಾರೆ. ಅನೇಕರ ಈ ಕನಸು ಕನಸಾಗಿಯೇ ಉಳಿಯುತ್ತೆ, ಮದುವೆಯಾದ ಬಳಿಕವಂತೂ ಇದು ಅಸಾಧ್ಯವೇ ಎಂಬ ಮನಸ್ಥಿತಿ ಅದೆಷ್ಟು ಮಹಿಳೆಯರಲ್ಲಿ ಇದ್ರೆ ಏಕಾಗೃತೆಯ ಮನಸ್ಸು ಮತ್ತು ಛಲ ಇದ್ದರೆ ಏನೆನ್ನಾದರೂ ಸಾಧಿಸಬಹುದು ಎಂಬುದನ್ನು ನಿವೇದಿತಾ ಶೆಟ್ಟಿ ಸಾಧಿಸಿ ತೋರಿಸಿದ್ದಾರೆ.

ಮೂರು ವರ್ಷದ ಮಗುವಿನ ತಾಯಿಯೂ ಆಗಿರುವ ನಿವೇದಿತಾ ಈ ಅಪೂರ್ವ ಸಾಧನೆಯನ್ನು ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಮೂಲತಃ ಉಡುಪಿಯವರಾದ ನಿವೇದಿತ ಸದಾನಂದ ಶೆಟ್ಟಿ ಮತ್ತು ಸಮಿತ ಶೆಟ್ಟಿ ದಂಪತಿಯ ಮಗಳು. ನಿವೇದಿತಾರ ಪತಿ ದಿವಾಕರ ಶೆಟ್ಟಿ ಓಮನ್ ಸರಕಾರಿ ಟೆಕ್ನಿಕಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿವೇದಿತಾ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು ತಮ್ಮ ಪ್ರೈಮರಿ ವಿದ್ಯಾಭ್ಯಾಸವನ್ನು ಉಡುಪಿಯ ಮಿಲಾಗ್ರಿಸ್ ಶಾಲೆ ಮುಗಿಸಿ ಬಳಿಕ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮುಗಿಸಿದ್ದಾರೆ.

ಕೊನೆಯ ವರ್ಷದ ಕಲಿಕೆಯಲ್ಲಿರುವಾಗಲೇ ಕ್ಯಾಂಪಸ್ ರಿಕ್ರೂಟ್‌ ಮೆಂಟ್‌ ನಲ್ಲಿ ಒಳ್ಳೆಯ ಕಂಪನಿಯಲ್ಲಿ ಆಯ್ಕೆಗೊಂಡು ನೌಕರಿಯಲ್ಲಿದ್ರೂ. ನಾಗರಿಕ ಸೇವಾ ಪರೀಕ್ಷೆ ಬರೆಯಬೇಕೆಂಬ ಮಹದಾದ ಆಸೆ ಮೊದಲಿನಿಂದಲೂ ಇತ್ತು. ಆರಂಭದಲ್ಲಿ ಉದ್ಯೋಗ ಮಾಡುತ್ತಲೇ UPSC ಪರೀಕ್ಷೆಗೆ ತಯಾರಿ ನಡೆಸಿದ್ದರು ತಮ್ಮ ಬಿಡುವಿನ ಸಮಯವನ್ನು ಇದಕ್ಕಾಮಿ ಮೀಸಲಿಟ್ಟಿದ್ದರು.

ಬಳಿಕ ತಮ್ಮ ಉದ್ಯೋಗ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಯುಪಿಎಸ್ಸಿ ಪರೀಕ್ಷೆ ತಯಾರಿಯಲ್ಲಿ ತೊಡಗಿಸಿಗೊಂಡರು. ತನ್ನ ಸತತ ಪ್ರಯತ್ನದಿಂದ ಯಾವುದೇ ಕೋಚಿಂಗ್ ಪಡೆಯದೆ 2022ರ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ನಿವೇದಿತಾರ ಏಕಲವ್ಯದಂತಹ ಮಹಾ ಸಾಧನೆಗೆ ಹ್ಯಾಟ್ಸ್ ಆಫ್ ಹೇಳದಿರಲು ಸಾಧ್ಯವೇ..!!?

Share Information
Advertisement
Click to comment

You must be logged in to post a comment Login

Leave a Reply