LATEST NEWS
ಮಂಗಳೂರಿನಲ್ಲಿ ನೂರರ ಗಡಿದಾಟಿದ ಈರುಳ್ಳಿ ಬೆಲೆ

ಮಂಗಳೂರಿನಲ್ಲಿ ನೂರರ ಗಡಿದಾಟಿದ ಈರುಳ್ಳಿ ಬೆಲೆ
ಮಂಗಳೂರು ನವೆಂಬರ್ 25:ಕರಾವಳಿ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಈಗ ನೂರರ ಆಸುಪಾಸಿನಲ್ಲಿದೆ. ಈಜಿಪ್ಟ್ ನಿಂದ ಈರುಳ್ಳಿ ಆಮದು ಮಾಡಿಕೊಂಡರು ಯಾವುದೇ ಈರುಳ್ಳಿ ಬೆಲೆಯಲ್ಲಿ ಯಾವುದೇ ರೀತಿಯ ಕಡಿಮೆ ಕಾಣಲಿಲ್ಲ. ಕಳೆದ ವಾರ 70 ರೂಪಾಯಿ ಆಸುಪಾಸಿನಲ್ಲಿದ್ದ ಈರುಳ್ಳಿ ಈ ವಾರ 100 ಗಡಿಯಲ್ಲಿದೆ.
ಈರುಳ್ಳಿ (ಹಳೆಯ) ಕೆಜಿಗೆ 80 ರೂ. ಇದ್ದುದು ಪ್ರಸ್ತುತ 90ರಿಂದ 96 ರೂ.ಗೇರಿದೆ. ಹೊಸತು ಈರುಳ್ಳಿ 60 ರೂ. ಇದ್ದುದು 80 ರೂ.ಗಳಿಗೆ ಮತ್ತು ಸಣ್ಣ ಈರುಳ್ಳಿ 40 ರೂ.ಗಳಿಂದ 50 ರೂ.ಗಳಿಗೆ ಏರಿಕೆಯಾಗಿದೆ.

ಉಡುಪಿ ಭಾಗದಲ್ಲಿಯೂ ದೊಡ್ಡ ಗಾತ್ರದ ನೀರುಳ್ಳಿಯ ಸಗಟು ಬೆಲೆ 75ರಿಂದ 80 ರೂ.ಗಳಲ್ಲಿದೆ. ರಖಂ ಆದರೆ ದೊಡ್ಡವಕ್ಕೆ 96 ರಿಂದ 100 ರೂ., ಮಧ್ಯಮ ಗಾತ್ರದವಕ್ಕೆ 90 ರೂ. ಮತ್ತು ಸಣ್ಣ ಈರುಳ್ಳಿಗೆ 50 ರೂ. ಆಸುಪಾಸಿನಲ್ಲಿದೆ.
ಈ ರೀತಿಯಾಗಿ ಈರುಳ್ಳಿ ಬೆಲೆ ಏರಿಕೆಯಾಗಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು ಎಂದು ಮಂಗಳೂರಿನ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರಿಗೆ ಹೆಚ್ಚಾಗಿ ಪಂಜಾಬ್, ಪುಣೆ ಮತ್ತು ಶಿವಮೊಗ್ಗ ಭಾಗದಿಂದ ಈರುಳ್ಳಿ ಪೂರೈಕೆಯಾಗುತ್ತದೆ. ಅಲ್ಲೆಲ್ಲ ವಿಪರೀತ ಮಳೆಯಾದ ಹಿನ್ನೆಲೆಯಲ್ಲಿ ಈರುಳ್ಳಿ ಕೊರತೆ ಉಂಟಾಗಿ ಬೆಲೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.