LATEST NEWS
ಶ್ವಾಸಕೋಶದಲ್ಲಿ ದುಂಬಿ ಸಿಲುಕಿ ಒಂದು ವರ್ಷದ ಮಗು ಸಾವು
ಕಾಸರಗೋಡು: ಒಂದು ವರ್ಷದ ಮಗುವಿನ ಶ್ವಾಸಕೋಶದಲ್ಲಿ ದುಂಬಿ ಸಿಲುಕಿ ಉಸಿರುಗಟ್ಟಿ ಸಾವನಪ್ಪಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಎ.ಸತ್ಯೇಂದ್ರ-ರಂಜಿನಿ ದಂಪತಿ ಪುತ್ರ ಎಸ್.ಅನ್ವೇದ್ ಮೃತ ಬಾಲಕ. ಶನಿವಾರ ಸಂಜೆ ಮನೆಯಲ್ಲಿ ಆಡುತ್ತಿದ್ದ ಈತ ದಿಢೀರ್ ಅಸ್ವಸ್ಥನಾದ. ತಕ್ಷಣ ಪಾಲಕರು ಮಗುವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ದರೂ, ಜೀವ ಉಳಿಸಲಾಗಲಿಲ್ಲ. ಭಾನುವಾರ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಆತನ ಶ್ವಾಸಕೋಶದಲ್ಲಿ ಸಣ್ಣ ದುಂಬಿ ಕಂಡುಬಂತು. ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.