DAKSHINA KANNADA
ಪುತ್ತಿಲ ಪರಿವಾರದ ಹಲ್ಲೆ ಯತ್ನ: ಹಿಂಜಾವೇ ವಿರುದ್ದ ಮತ್ತೊಂದು ದೂರು ದಾಖಲು..!

ಪುತ್ತಿಲ ಪರಿವಾರದ ಸದಸ್ಯನೋರ್ವನ ಮೇಲೆ ಹಲ್ಲೆಗೆ ಯತ್ನಿಸಿದ್ದ ಹಿಂದೂ ಜಾಗರಣಾ ವೇದಿಕೆಯ ಸದಸ್ಯನ ಮೇಲೆ ಇದೀಗ ಮತ್ತೊಂದು ದೂರು ದಾಖಲಾಗಿದೆ.
ಪುತ್ತೂರು : ಪುತ್ತಿಲ ಪರಿವಾರದ ಸದಸ್ಯನೋರ್ವನ ಮೇಲೆ ಹಲ್ಲೆಗೆ ಯತ್ನಿಸಿದ್ದ ಹಿಂದೂ ಜಾಗರಣಾ ವೇದಿಕೆಯ ಸದಸ್ಯನ ಮೇಲೆ ಇದೀಗ ಮತ್ತೊಂದು ದೂರು ದಾಖಲಾಗಿದೆ.

5 ತಿಂಗಳ ಹಿಂದೆ ಮನೆಗೆ ಅಕ್ರಮ ಪ್ರವೇಶ ಮಾಡಿದ ಘಟನೆಯ ಕುರಿತು ತಡವಾಗಿ ದೂರು ದಾಖಲು ಮಾಡಲಾಗಿದ್ದು ಪುತ್ತಿಲ ಪರಿವಾರದ ಸದಸ್ಯ ಮನೀಶ್ ಕುಲಾಲ್ ತಂದೆ ಪುತ್ತೂರು ನಗರ ಪೋಲೀಸ್ ಠನೆಗೆ ದೂರು ನೀಡಿದ್ದಾರೆ. ಹಿಂದೂ ಜಾಗರಣ ವೇದಿಕೆ ಮುಖಂಡ ಅಜಿತ್ ರೈ ಹೊಸಮನೆ ವಿರುದ್ಧ ದೂರು ದಾಖಲಿಸಿದ್ದು, ಜುಲೈ 10 ರಂದು ಮನೀಶ್ ಕುಲಾಲ್ ಮನೆಗೆ ಹೋಗಿದ್ದ ಅಜಿತ್ ರೈ ಮನಿಶ್ ಮೇಲೆ ಹಲ್ಲೆಗೆ ಮುಂದಾಗಿದ್ದ, ಅಜಿತ್ ರೈ ಮತ್ತು ಮನೀಶ್ ಕುಲಾಲ್ ಇಬ್ಬರೂ ಹಿಂದೂ ಜಾಗರಣ ವೇದಿಕೆಯಲ್ಲಿ ಒಟ್ಟಿಗೆ ದುಡಿಯುತ್ತಿದ್ದವರು ಆದ್ರೆ ಅದ್ಯಾಕೋ ಒಂದು ವಿಷಯದ ಬಳಿಕ ಮನಸ್ತಾಪ ಉಂಟಾಗಿದ್ದು ಅಂದು ಪ್ರಕರಣ ರಾಜಿಯಲ್ಲಿ ಮುಕ್ತಾಯವಾಗಲಿದೆ ಮನಿಶ್ ಕುಲಾಲ್ ತಂದೆ ಆನಂದ ಮೂಲ್ಯ ಅಂದು ಕೊಂಡಿದ್ದರು. ಆದ್ರೆ ಕಳೆದ ಎರಡು ದಿನದ ಹಿಂದೆ ಮನಿಶ್ ಕುಲಾಲ್ ಮೇಲೆ ಮತ್ತೊಂದು ಹಲ್ಲೆ ಯತ್ನ ಘಟನೆ ನಡೆದಿದೆ. ಇದರಿಂದ ಭಯಗೊಂಡಆರು ತಿಂಗಳ ಹಿಂದಿನ ಘಟನೆಯ ಕುರಿತು ಆನಂದ ಮೂಲ್ಯರು ಪುತ್ತೂರು ನಗರ ಠಾಣೆಗೆಯಲ್ಲಿ ದೂರು ದಾಖಲಿಸಿದ್ದಾರೆ.