LATEST NEWS
ಒಂದು ದಿನದ ಮಗುವನ್ನು ಕಾರಿನಡಿ ಬಿಟ್ಟು ಹೋದ ಪಾಪಿ ತಾಯಿ….!!

ಉಳ್ಳಾಲ ಅಕ್ಟೋಬರ್ 07: ಕಾರಿನ ಅಡಿಯಲ್ಲಿ ಒಂದು ದಿನದ ಮಗುವನ್ನು ಬಿಟ್ಟು ಹೋಗಿರುವ ಘಟನೆ ತೊಕ್ಕೊಟ್ಟು ಕಾಫಿಕಾಡಿನ ಅಂಬಿಕಾರೋಡಿನ ಗೇರು ಅಭಿವೃದ್ದಿ ಕೇಂದ್ರದ ಬಳಿ ನಡೆದಿದೆ.
ತೊಕ್ಕೊಟ್ಟು ಕಾಪಿಕಾಡ್ ನಿವಾಸಿ ಅಮರ್ ಅವರ ಮನೆಯ ಸಮೀಪ ಮಗುವಿನ ಕೂಗು ಕೇಳಿದ್ದು, ಮನೆಯವರು ಹುಡುಕಾಡಿದಾಗ ಮನೆಯ ಸಮೀಪ ನಿಲ್ಲಿಸಿದ್ದ ಕಾರಿನ ಅಡಿಯಲ್ಲಿ ಮಗು ಪತ್ತೆಯಾಗಿದೆ. ಕಾರಿನ ಕೆಳಗಡೆ ಬಿಳಿ ಬಟ್ಟೆಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಮಗು ಪತ್ತೆಯಾಗಿದೆ. ಈ ವೇಳೆ ಅಮರ್ ಅವರು ನೆರೆ ಮನೆಯವರಲ್ಲಿ ವಿಚಾರಿಸಿದ್ದಾರೆ. ಸ್ಥಳೀಯ ಜನರಿಗೂ ಮಗು ಯಾರದ್ದು ಎಂದು ಪತ್ತೆ ಹಚ್ಚಲು ಆಗಿಲ್ಲ. ಈ ಹಿನ್ನೆಲೆಯಲ್ಲಿ ಅಮರ್ ಅವರ ಮನೆಮಂದಿ ಮಗುವನ್ನು ಉಪಚರಿಸಿ, ತಕ್ಷಣ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ನೀಡಿದ್ದಾರೆ.
