Connect with us

    LATEST NEWS

    ಕೇರಳ – ಅಸಹಜವಾಗಿ ಸತ್ತವರಲ್ಲಿ ನಿಪಾ ವೈರಸ್ ಪತ್ತೆ…..!!

    ನವದೆಹಲಿ ಸೆಪ್ಟೆಂಬರ್ 12 : ಕೇರಳದಲ್ಲಿ ಇದೀಗ ನಿಪಾ ವೈರಸ್ ಭೀತಿ ಆವರಿಸಿದ್ದು, ಕೋಯಿಕ್ಕೋಡ್ ನಲ್ಲಿ ಅಸಹಜವಾಗಿ ಮೃತಪಟ್ಟಿರುವ ಇಬರಲ್ಲೂ ನಿಪಾ ವೈರಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವಿಯಾ ತಿಳಿಸಿದ್ದಾರೆ.


    ಸೆಪ್ಟೆಂಬರ್ 11 ರಂದು ಕೇರಳ ಕೊಯಿಕ್ಕೊಡ್ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಅಸಹಜವಾಗಿ ಸಾವನಪ್ಪಿದ್ದರು, ಈ ಸಾವಿನ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ನಿಪಾ ವೈರಸ್ ಕುರಿತಂತೆ ಪರೀಕ್ಷೆಗೆ ಪುನಾಗೆ ಕಳುಹಿಸಲಾಗಿತ್ತು. ಇದೀಗ ಶಂಕಿತರ ಪರೀಕ್ಷೆಯ ವರದಿಯಲ್ಲಿ ನಿಪಾ ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಮಾಂಡವಿಯಾ ತಿಳಿಸಿದ್ದಾರೆ. ವರದಿಯ ಪ್ರಕಾರ ವೈರಸ್‌ನಿಂದ ಮೊದಲ ಸಾವು ಆಗಸ್ಟ್‌ 30 ರಂದು ಮತ್ತು ಎರಡನೇ ಸಾವು ಸೋಮವಾರ (ಸೆ.11)ರಂದು ಸಂಭವಿಸಿದೆ.

    ಈ ಹಿನ್ನೆಲೆಯಲ್ಲಿ ಕೇರಳ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲು ಕೇಂದ್ರದಿಂದ ನಿಪಾ ವೈರಸ್‌ ನಿರ್ವಹಣಾ ತಂಡವನ್ನು ಕಳುಹಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವಿಯಾ ತಿಳಿಸಿದ್ದಾರೆ. ಈಗಾಗಲೇ ಕೇರಳ ಸರ್ಕಾರ ಕೋಯಿಕ್ಕೋಡ್‌ನಲ್ಲಿ ಕಂಟ್ರೋಲ್‌ ರೂಮ್‌ನ್ನು ಸ್ಥಾಪಿಸಿದ್ದು, ಮುಂಜಾಗೃತಾ ಕ್ರಮವಾಗಿ ಜನರಿಗೆ ಮಾಸ್ಕ್‌ ಧರಿಸಲು ಸೂಚನೆ ನೀಡಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *