DAKSHINA KANNADA
ಎ.14ರಂದು ಪ್ರಧಾನಿ ಮೋದಿ ಮಂಗಳೂರು ಭೇಟಿ ಸಂದರ್ಭ ಸೌಜನ್ಯ ಪ್ರಕರಣದ ಮರು ತನಿಖೆ ಬಗ್ಗೆ ಲಿಖಿತ ಅಭಿಪ್ರಾಯಕ್ಕೆ ಹೋರಾಟ ಸಮಿತಿ ಒತ್ತಾಯ

ಮಂಗಳೂರು: ಸೌಜನ್ಯ ಪ್ರಕರಣ ಸಿಬಿಐನಿಂದ ನ್ಯಾಯಾಲಯದ ಉಸ್ತುವಾರಿಯಲ್ಲಿ ಮರುತನಿಖೆ ನಡೆಸಲು ಕೇಂದ್ರ ಮತ್ತು ರಾಜ್ಯ ಸರಕಾರ ಹೈಕೋರ್ಟ್ ಗೆ ಲಿಖಿತ ಅಭಿಪ್ರಾಯ ನೀಡಬೇಕು. ಈ ಬಗ್ಗೆ ಎ.14 ರಂದು ಮಂಗಳೂರಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಘೋಷಣೆ ಮಾಡಬೇಕು ಎಂದು ಸೌಜನ್ಯ ಪರ ಹೋರಾಟ ಸಮಿತಿ ಆಗ್ರಹಿಸಿದೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಪ್ರಮುಖ ಮಹೇಶ್ ಶೆಟ್ಟಿ ತಿಮರೋಡಿ ಇಲ್ಲವಾದರೆ ಈ ಬಾರಿಯ ಚುನಾವಣೆಯಲ್ಲಿ ನೋಟಾ ಅಭಿಯಾನ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಮಂಗಳೂರಿಗೆ ಬರಲಿದ್ದಾರೆ. ಉಜಿರೆ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಳ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಕೊಲೆಯ ಮರುತನಿಖೆ ಕುರಿತು ಕರ್ನಾಟಕ ಮಾನ್ಯ ಉಚ್ಚ ನ್ಯಾಯಾಲಯವು ಈಗ ದೇಶದ ಉನ್ನತ ತನಿಖಾ ಸಂಸ್ಥೆಯಾದ CBI ಗೆ ತುರ್ತು ನೋಟೀಸ್ ಜಾರಿ ಮಾಡಿ ಮರು ತನಿಖೆ ಕುರಿತು CBI ಅಭಿಪ್ರಾಯ ಕೇಳಿದೆ. CBI ತನಿಖಾ ಸಂಸ್ಥೆಯು ಕೇಂದ್ರ ಗೃಹ ಇಲಾಖೆ ಮತ್ತು ನೇರವಾಗಿ ಈ ದೇಶದ ಪ್ರಧಾನಿ ಕಚೇರಿಯ ಕಾರ್ಯವ್ಯಾಪ್ತಿಯಲ್ಲಿ ಬರುತ್ತದೆ. ಹೀಗಾಗಿ ಕರಾವಳಿ ಜಿಲ್ಲೆಗಳ ಬಿ ಜೆ ಪಿ ಹಿಂದೂ ನಾಯಕರುಗಳು ಮೋದಿಜಿ ಮನವೊಲಿಸಿ 14 ರ ಸಭೆಯಲ್ಲಿ ನ್ಯಾಯಾಲಯದ ಉಸ್ತುವಾರಿಯಲ್ಲಿ CBI ಸಂಸ್ಥೆಯಿಂದ ಪ್ರಕರಣದ ಮರುತನಿಖೆಯ ಅಭಿಪ್ರಾಯವನ್ನು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ತಿಳಿಸಲು ಲಿಖಿತ ಆದೇಶ ಮಾಡಬೇಕು. ಸೌಜನ್ಯ ಹತ್ಯೆಗಿಂತ ಮುಂಚೆ ನಡೆದ ಮಾವುತ ನಾರಾಯಣ ಯಮುನಾ ಜೋಡಿ ಕೊಲೆ, ವೇದದಲ್ಲಿ, ಪದ್ಮಲತಾ ಕೊಲೆ ಮತ್ತು ಪ್ರಕರಣ ದಾಖಲಾಗದ ಅನೇಕ ಹಿಂದೂ ಹೆಣ್ಣು ಮಕ್ಕಳ ಅತ್ಯಾಚಾರ ಕೊಲೆಗಳ ವಿಶೇಷ ತನಿಖೆಗಾಗಿ ಅವತ್ತಿನ ದಿವಸ ಪ್ರಧಾನಿ ಮೋದಿಜಿ ಅವರು ನ್ಯಾಯಾಲಯ ಮೇಲುಸ್ತುವಾರಿಯಲ್ಲಿ CBI ಗೆ ಲಿಖಿತವಾಗಿ, ಅದೇಶಿಸಲು ಕರಾವಳಿಯ ಪ್ರಖರ ಹಿಂದೂ BJP ನಾಯಕರು ಒತ್ತಾಯಿಸಬೇಕು. RBI ನಿಯಮ, ಬ್ಯಾಂಕಿಂಗ್ ವ್ಯವಸ್ಥೆ, ಲೇವಾದೇವಿ ಕಾನೂನನ್ನು ಗಾಳಿಗೆ ತೂರಿ, ಪವಿತ್ರ ಹಿಂದೂ ದೇಗುಲದ ಹೆಸರು ದುರ್ಬಳಕೆ ಮಾಡಿ ಸಾವಿರಾರು ಕೋಟಿ ರೂಪಾಯಿಯ ರಾಜ್ಯಾಧ್ಯಂತ ಅಕ್ರಮ ಬಡ್ಡಿ ದಂದೆ ನಡೆಸುತ್ತಾ ಪ್ರತಿವಾರ ಅಮಾಯಕ ಸಂಘದ ಸದಸ್ಯರ ಮನೆಗೆ ನುಗ್ಗಿ ಚಿತ್ರ ಹಿಂಸೆ ಕೊಡುತ್ತಿರುವ ಸಂಸ್ಥೆಯ ಬಡ್ಡಿ ದಂದೆಯ ಅಕ್ರಮವನ್ನು ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯಕ್ಕೆ ( ED ) ಮಾನ್ಯ ಮೋದಿಕೆ ಅವರು ಲಿಖಿತವಾಗಿ ಒಪ್ಪಿಸಬೇಕು. ಈ ಕುರಿತು BIP ಹಿಂದೂ ನಾಯಕರು ಮೋದಿಜಿ ಅವರ ಮನವೊಲಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ. ಈ ಮೇಲಿನ ಸಮಸ್ಯೆಗಳಿಗೆ ಸ್ಪಂದಿಸದೆ ಜನಗಾಮಾನ್ಯರ ಬೇಡಿಕೆಗೆ ಸ್ಪಂದಿಸದ ದ.ಕ ಜಿಲ್ಲೆಯಿಂದ ಆಯ್ಕೆ ಆಗಿರುವ ರಾಜ್ಯ ಸಭಾ ಸದಸ್ಯರ ರಾಜೀನಾಮೆ ಯನ್ನೂ ಅಂದಿನ ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರು ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಮೋದಿಜಿ ಅವರ ಸಭೆಯಲ್ಲಿ ಹಿಂದೂ ಸಮಾಜದ ಈ ಎಲ್ಲ ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಈಡೇರಿಸಬೇಕು. ಇಲ್ಲವಾದಲ್ಲಿ ಹಿಂದೂ ಧರ್ಮದ ರಕ್ಷಣೆ ಈ ಕರಾವಳಿ ಜಿಲ್ಲೆಯ ನಾಯಕರಿಂದ ಸಾಧ್ಯವಿಲ್ಲ ಮತ್ತು ಎಲ್ಲರೂ ಅತ್ಯಾಚಾರಿಗಳ ಪರ ಎನ್ನುವ ಸಂದೇಶವನ್ನು ಸಾರ್ವಜನಿಕವಾಗಿ ನೀಡಲಿದ್ದೇವೆ. ಈ ಮೂಲಕ NOTA ಅಭಿಯಾನವನ್ನು ತೀವ್ರಗೊಳಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಹೋರಾಟ ಸಮಿತಿಯ ಪ್ರಸನ್ನ ರವಿ ಮಾತನಾಡಿ, ಸೌಜನ್ಯ ಪರ ಹೋರಾಟ ಗಾರರು ನೋಟ ಅಭಿಯಾನಕ್ಕೆ ಮುಂದಾಗಿರುವ ನಿಟ್ಟಿನಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ನಕಲಿ ಐ ಡಿ ಮೂಲಕ ಹೋರಾಟ ಗಾರ ರ ತೇಜೋ ವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾವು ಯಾವುದೇ ಪಕ್ಷದ ಏಜೆಂಟ್ ಅಲ್ಲ. ನಾನು ಸಾಮಾಜಿಕ ಹೋರಾಟ ಗಾಯಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಈ ರೀತಿ ತೇಜೋವಧೆ ಬಿಟ್ಟು ಮುಖತ ಚರ್ಚೆಗೆ ಬನ್ನಿ ಎಂದು ಹೇಳಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವೂ ಕೂಡ ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸೌಜನ್ಯ ಪ್ರಕರಣವನ್ನು ಅದಷ್ಟು ಬೇಗ ಮರು ತನಿಖೆಯ ಅಭಿಪ್ರಾಯ ನೀಡಬೇಕು, ಅಕ್ರಮ ವಂಚನೆಯಿಂದ ವಶಪಡಿಸಿಕೊಂಡ ದಲಿತರ ಮತ್ತು ಸರ್ಕಾರದ ಸಾವಿರಾರು ಎಕರೆ ಭೂಮಿಯನ್ನು ಧರ್ಮೋದ್ಯಮಿಗಳಿಂದ ವಾಪಸ್ ಪಡೆಯಬೇಕು. ಇವು ರಾಜ್ಯ ಸರ್ಕಾರದ ಮುಂದೆ ಇರುವ ಬೇಡಿಕೆಗಳು ಸರ್ಕಾರ ಕೂಡಲೇ ಈ ಬೇಡಿಕೆಗಳಿಗೆ ಸ್ಪಂದಿಸದೆ ಹೋದರೆ ಕರಾವಳಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ NOTA ಅಭಯಾನ ತೀವ್ರ ಗೊಳಿಸಲಾಗುವುದು ಎಂದೂ ಅವರು ಹೇಳಿದರು.