DAKSHINA KANNADA
ಅಕ್ಟೋಬರ್ 22 ರಂದು ಮಂಗಳೂರಿನಲ್ಲಿ ‘ಈಝೀ ಆಯುರ್ವೇದ’ ಆಸ್ಪತ್ರೆ ಉದ್ಘಾಟನೆ..
ಮಂಗಳೂರು: ಸಮಾಜದ ಎಲ್ಲಾ ವರ್ಗಗಳ ಜನರಿಗೆ ಅತ್ಯುತ್ತಮವಾದ ಆಯುರ್ವೇದ ಮತ್ತು ನೈಸರ್ಗಿಕ ಚಿಕಿತ್ಸೆಗಳೊಂದಿಗೆ ಸೇವೆ ಸಲ್ಲಿಸಲು ಮತ್ತು ಪ್ರಪಂಚದಾದ್ಯಂತದ ಆಯುರ್ವೇದ ವಿದ್ಯಾರ್ಥಿಗಳಿಗೆ ಪ್ರಾಚೀನ ಆಯುರ್ವೇದ ಜ್ಞಾನದೊಂದಿಗೆ ತರಬೇತಿಯನ್ನು ನೀಡುವ ಉದ್ಧೇಶದಿಂದ ಪರಿಣತ ತಜ್ಞ ವೈದ್ಯರ ತಂಡವನ್ನು ಒಳಗೊಂಡ ಈಝೀ ಆಯುರ್ವೇದ ಆಸ್ಪತ್ರೆಯು ಇದೇ ಅಕ್ಟೋಬರ್ 22 ಮಂಗಳೂರು ನಗರದ ಮೋರ್ಗನ್ಸ್ ಗೇಟ್ ನಲ್ಲಿ ಕಾರ್ಯಾರಂಭಿಸಲಿದೆ ಎಂದು CMO ಡಾ. ರವಿಗಣೇಶ್ ಮೋಗ್ರ ಮಾಹಿತಿ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿ ಮಾತನಾಡಿದ ಅವರು ಸುಂದರ ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟೆ ಆಯುರ್ವೇದ ಆಸ್ಪತ್ರೆಯ ಕೊರತೆಯಿದೆ. ಈಝೀ ಆಯುರ್ವೇದ ಆಸ್ಪತ್ರೆ ನೇತ್ರಾವತಿ ನದಿಯ ಮಡಿಲಲ್ಲಿ ಸುಂದರ ಹಾಗೂ ಪ್ರಶಾಂತವಾದ ಪ್ರದೇಶದಲ್ಲಿ ನೆಲೆಸಿದೆ. ಇದು ಡಿಲಕ್ಸ್, ಸೆಮಿ ಡಿಲಕ್ಸ್, ಸ್ಟ್ಯಾಂಡರ್ಡ್ ರೂಮ್‌ಗಳು ಮತ್ತು ಜನರಲ್ ವಾರ್ಡ್‌ಗಳನ್ನು ಹೊಂದಿರುವ 50 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯಾಗಿದೆ.
ಈಝೀ ಆಯುರ್ವೇದ ಆಸ್ಪತ್ರೆಯು ಸೊಗಸಾದ ಪಂಚಕರ್ಮ ಚಿಕಿತ್ಸೆಗಳು, ವಿಶೇಷ ಆಯುರ್ವೇದ ಶಸ್ತ್ರಚಿಕಿತ್ಸಾ ಮತ್ತು ಪ್ಯಾರಾ ಶಸ್ತ್ರಚಿಕಿತ್ಸಾ ವಿಧಾನಗಳು, ಯೋಗ ಮತ್ತು ಧ್ಯಾನ, ಫಿಸಿಯೋಥೆರಪಿ ವಿಭಾಗ, ಸಮಗ್ರ ಆಯುರ್ವೇದ ಸೌಂದರ್ಯವರ್ಧಕ ಆರೈಕೆ, ಅತ್ಯುತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಕಸ್ಟಮೈಸ್ ಮಾಡಿದ ಆಹಾರ ಯೋಜನೆಗಳನ್ನು ಒದಗಿಸುತ್ತದೆ.
ಸಮಾಜದ ಎಲ್ಲಾ ವರ್ಗಗಳ ಜನರಿಗೆ ನಮ್ಮ ಸೇವೆಯನ್ನು ತಲುಪಿಸಲು, ನಮ್ಮ ಸಮಾನ ಮನಸ್ಕ ವೈದ್ಯರ ತಂಡವು ಈಝೀ ಆಯುರ್ವೇದ ಆಸ್ಪತ್ರೆಯನ್ನು ಪ್ರಾರಂಭಿಸುತ್ತಿದ್ದು, ಇದು ಅಕ್ಟೋಬರ್ 22, 2023 ರಂದು ಮಂಗಳೂರಿನ ಮೋರ್ಗನ್ಸ್ ಗೇಟ್‌ನಲ್ಲಿ ಉದ್ಘಾಟನೆಗೊಳ್ಳಲಿದೆ.
ಈಝೀ ಆಯುರ್ವೇದ ಆಸ್ಪತ್ರೆಯಲ್ಲಿರುವ ತಜ್ಞ ನುರಿತ ವೈದ್ಯರ ತಂಡವು ನ್ಯೂರೋ ಆಯುರ್ವೇದ, ಡರ್ಮಾ ಆಯುರ್ವೇದ, ಥೈರೋ ಆಯುರ್ವೇದ, ಆರ್ಥೋ ಆಯುರ್ವೇದ, ಆಯುರ್ ಸರ್ಜರಿ ಮತ್ತು ಗೇನೋ ಆಯುರ್ವೇದದಂತಹ ವಿವಿಧ ವಿಭಾಗಗಳ ಅಡಿಯಲ್ಲಿ ವಿವಿಧ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲಿದೆ ಎಂದರು.
ಕೋವಿಡ್ ನಂತರದ ಜಗತ್ತಿನಲ್ಲಿ, ನೈಸರ್ಗಿಕ ರೀತಿಯಲ್ಲಿ ರೋಗಗಳಿಗೆ ಚಿಕಿತ್ಸೆ ನೀಡುವ ಅಗತ್ಯವು ಬಹಳ ಹೆಚ್ಚಾಗಿದೆ. ಆಯುರ್ವೇದದ ಮೂಲಕ ಆರೋಗ್ಯವನ್ನು ಸುಧಾರಿಸುವುದು ಆರೋಗ್ಯವಂತರಿಗೂ, ರೋಗಿಗಳಿಗೂ ಬಹಳ ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜನಾರ್ಧನ ವಿ. ಹೆಬ್ಬಾರ್ ಮಾತನಾಡಿ 2009 ರಲ್ಲಿ ಪ್ರಾರಂಭವಾದ EasyAyurveda.com ವೆಬ್‌ಸೈಟ್, ಈಗಾಗಲೇ 5,000 ಕ್ಕಿಂತಲೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದೆ. 75 ಕ್ಕೂ ಹೆಚ್ಚು ದೇಶಗಳಿಂದ 30,000ಕ್ಕಿಂತಲೂ ಹೆಚ್ಚು ಜನರು ಪ್ರತಿದಿನ EasyAyurveda.com ಗೆ ಭೇಟಿ ನೀಡುತ್ತಾರೆ. ಆಯುರ್ವೇದದ ಜ್ಞಾನವನ್ನು ಜಗತ್ತಿಗೆ ಪ್ರಸಾರ ಮಾಡಲು 25 ಪುಸ್ತಕಗಳು ಮತ್ತು ಇ ಪುಸ್ತಕಗಳನ್ನು ಇಂಗ್ಲಿಷ್, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ರಚಿಸಿ ಪ್ರಕಟಿಸಲಾಗಿದೆ ಎಂದ ಅವರು ಜಗತ್ತಿನಾದ್ಯಂತ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು USA, ಯೂರೋಪ್, ರಷ್ಯಾ, ಕೆನಡಾ ಮುಂತಾದ ದೇಶಗಳಿಂದ ಆನ್‌ಲೈನ್ ಮಧ್ಯಮದ ಮೂಲಕ ಮತ್ತು ನೇರವಾಗಿ ತರಬೇತಿಯನ್ನು ಪಡೆದಿದ್ದಾರೆ. ಪ್ರಪಂಚದಾದ್ಯಂತದ ನೂರಾರು ರೋಗಿಗಳು ನಮ್ಮ ವೈದ್ಯರಿಂದ ಆಯುರ್ವೇದ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದರು.
ಇನ್ನು 16 ವರ್ಷಗಳ ಕ್ಲಿನಿಕಲ್ ಅನುಭವ ಹೊಂದಿರುವ ಅನುಭವಿ ಆಯುರ್ವೇದ ವೈದ್ಯೆ ಡಾ. ಅಮೃತಾ ಟಿ ಟಿ ಅವರು ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಗಳಿಗೆ ಲಭ್ಯವಿರುವ ಚಿಕಿತ್ಸೆಯ ಬಗ್ಗೆ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಅಶ್ವಿನ್ ಶೆಟ್ಟಿ ಮತ್ತು ಶ್ರೀಮತಿ ಕಾತ್ಯಾಯಿನಿ ಉಪಸ್ಥಿತರಿದ್ದರು.