Connect with us

DAKSHINA KANNADA

ಮಾರ್ಚ್ 11ಕ್ಕೆ ಉಜ್ರುಪಾದೆಯಲ್ಲಿ ಕೊರಗಜ್ಜ ದೈವದ ನೇಮೋತ್ಸವ

ಪುತ್ತೂರು, ಮಾರ್ಚ್ 10: ಪುತ್ತೂರಿನ ಬಲ್ನಾಡು ಗ್ರಾಮದ ಉಜ್ರುಪಾದೆಯ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಮಾರ್ಚ್ 11 ರಂದು ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಮೊಕ್ತೇಸರ ಕೆ.ಬಾಬು ಪೂಜಾರಿ ಬಲ್ನಾಡು ಹೇಳಿದರು.

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹಲವು ಶತಮಾನಗಳಿಂದ ಆರಾಧಿಸಿಕೊಂಡು ಬರುತ್ತಿದ್ದ ಕೊರಗಜ್ಜ ಕ್ಷೇತ್ರದ ಜೂರ್ಣೋದ್ಧಾರವನ್ನು 2019 ರಲ್ಲಿ ಮಾಡಲಾಗಿದೆ. ಉಳ್ಳಾಲ್ತಿ ಅಮ್ಮನವರ ದೂತನಾಗಿ ಗ್ರಾಮ ಸಂಚಾರ ಮಾಡುವ ಮೂಲಕ ಕೊರಗಜ್ಜ ಈ ಭಾಗದಲ್ಲಿ ತನ್ನ ಕಾರಣಿಕವನ್ನು ತೋರಿಸುತ್ತಿದ್ದ.

ತನ್ನ ಕಾರಣಿಕದಿಂದಾಗಿಯೇ ರಾಜ್ಯದ ಹಲವು ಕಡೆಗಳಿಂದ ಭಕ್ತಾಧಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಅಭೀಷ್ಟಗಳನ್ನು ಪೂರೈಸುತ್ತಿದ್ದಾರೆ. ಮಾರ್ಚ್ 11 ರಂದು ಕೊರಗಜ್ಜ ದೈವದ ನೇಮೋತ್ಸವವು ರಾತ್ರಿ 7 ಗಂಟೆಗೆ ನಡೆಯಲಿದ್ದು, ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಈ ನೇಮೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

Advertisement
Click to comment

You must be logged in to post a comment Login

Leave a Reply