DAKSHINA KANNADA
ಓಂ ಸಾಯಿ ಇಂಡಸ್ಟ್ರೀಸ್ ಮಾಲೀಕ ದಾಮೋದರ ಪೂಜಾರಿ ನೇಣು ಬಿಗಿದು ಆ*ತ್ಮಹ*ತ್ಯೆ
ವಿಟ್ಲ ಡಿಸೆಂಬರ್ 07: ಓಂ ಸಾಯಿ ಇಂಡಸ್ಟ್ರೀಸ್ ಮಾಲೀಕ ದಾಮೋದರ್ ಪೂಜಾರಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವಿಟ್ಲ ಬದನಾಜೆ ನಿಡ್ಯ ಎಂಬಲ್ಲಿ ನಡೆದಿದೆ.
ಮೃತರನ್ನು ಓಂ ಸಾಯಿ ಇಂಡಸ್ಟ್ರೀಸ್ ಮಾಲಕ ಬದನಾಜೆ ನಿಡ್ಯ ನಿವಾಸಿ ದಾಮೋದರ್ ಪೂಜಾರಿ (60) ಎಂದು ಗುರುತಿಸಲಾಗಿದೆ. ದಾಮೋದರ್ ಪೂಜಾರಿ ತಮ್ಮ ಮನೆಯ ಮೇಲಿನ ಹಿಂಬದಿ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.