LATEST NEWS
Olympics 2024: ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಏಳು ತಿಂಗಳ ಗರ್ಭಿಣಿ!
ಪ್ಯಾರಿಸ್: ಈಜಿಪ್ಟಿನ ಕತ್ತಿವರಸೆ ಪಟು ನದಾ ಹಫೀಜ್ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿ ಸುದ್ದಿಯಾಗಿದ್ದಾರೆ. ಕ್ರೀಡೆ ಮೇಲೆ ನದಾ ಅವರಿಗಿರುವ ಪ್ರೀತಿ, ಅವರ ಬದ್ಧತೆಗೆ ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾನು 7 ತಿಂಗಳ ಗರ್ಭಿಣಿಯಾಗಿದ್ದುಕೊಂಡು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾಗಿ ನದಾ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಮೂಲಕ ಬಹಿರಂಗಪಡಿಸಿದ್ದಾರೆ. 3 ಬಾರಿಯ ಒಲಿಂಪಿಯನ್, ಆದರೆ ಈ ಬಾರಿ ಪುಟಾಣಿ ಒಲಿಂಪಿಯನ್ ಅನ್ನು ಹೊತ್ತೂಯ್ಯುತ್ತಿದ್ದೇನೆ ಎಂದು ನದಾ ಬರೆದುಕೊಂಡಿದ್ದಾರೆ.
2016ರಲ್ಲಿ ರಿಯೋ ಮೂಲಕ ಒಲಿಂಪಿಕ್ಸ್‌ಗೆ ಪದಾರ್ಪಣೆ ಮಾಡಿದ್ದ ನದಾ, 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಪಾಲ್ಗೊಂಡಿದ್ದರು. 2019ರ ಆಲ್ ಆಫ್ರಿಕಾ ಗೇಮ್ಸ್‌ನಲ್ಲಿ 2 ಚಿನ್ನದ ಪದಕಗಳನ್ನು ಗೆದ್ದದ್ದು ಅವರ ಅತ್ಯುತ್ತಮ ಸಾಧನೆ. ಈ ಬಾರಿ ಮಹಿಳೆಯರ ವೈಯಕ್ತಿಕ ಸಬ್ರೆ ವಿಭಾಗದಲ್ಲಿ ಸ್ಪರ್ಧಿಸಿದ್ದ ನದಾ ಹಫೀಜ್, 2ನೇ ಸುತ್ತಿನಲ್ಲಿ ಸೋಲನುಭವಿಸಿದರು.