LATEST NEWS
ದಕ್ಷಿಣಕನ್ನಡ ಜಿಲ್ಲೆಗೆ ಸೇರಿದ ಪಡಿತರ ಚೀಟಿ ಕುಂದಾಪುರ ರಸ್ತೆ ಬದಿಯಲ್ಲಿ ಪತ್ತೆ

ದಕ್ಷಿಣಕನ್ನಡ ಜಿಲ್ಲೆಗೆ ಸೇರಿದ ಪಡಿತರ ಚೀಟಿ ಕುಂದಾಪುರ ರಸ್ತೆ ಬದಿಯಲ್ಲಿ ಪತ್ತೆ
ಉಡುಪಿ ಜೂನ್ 22: ಹಳೆಯ ಪಡಿತರ ಚೀಟಿ ಇರುವ ಗೋಣಿಚೀಲ ಕುಂದಾಪುರ ತಾಲೂಕಿನ ವತ್ತಿನೆಣೆ ಬಳಿ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ರಾಷ್ಡ್ರೀಯ ಹೆದ್ದಾರಿ ಪಕ್ಕದ ಹರಿಯುವ ನೀರಿನಲ್ಲಿ ತೇಲಿಬಂದ ಗೋಣಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಅಧಿಕ ಪಡಿತರ ಚೀಟಿಯಿತ್ತು. ಈ ಪಡಿತರ ಚೀಟಿಗಳು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ವಿಟ್ಲ ಕ್ಷೇತ್ರಕ್ಕೆ ಸೇರಿದ್ದು ಎಂದು ಹೇಳಲಾಗಿದೆ.
ಚೀಲದಲ್ಲಿ ಇರಿಸಿದ್ದ ಪಡಿತರ ಚೀಟಿಗಳಲ್ಲಿ ಹಲವು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ಸ್ಥಳಕ್ಕಾಗಮಿಸಿದ ಬೈಂದೂರು ಪೊಲೀಸರು ಪರಿಶೀಲನೆ ನಡೆಸಿದ್ದು ಗೋಣಿಯಲ್ಲಿದ್ದ ಪಡಿತರ ಚೀಟಿಗಳು 2013,2014,2015ನೇ ವರ್ಷ ಮುದ್ರಿಸಿದ ಪಡಿತರ ಚೀಟಿಗಳು ಎಂದು ತಿಳಿದು ಬಂದಿದ್ದು, ಹೊಸ ಪಡಿತರ ಚೀಟಿಗಳನ್ನು ನೀಡುವಾಗ ಹಳೆಯ ಪಡಿತರ ಚೀಟಿಗಳನ್ನು ವಾಪಾಸ್ ಪಡೆದಿದ್ದು, ಅದನ್ನು ಸರಿಯಾಗಿ ವಿಲೇವಾರಿ ಮಾಡದೇ ಈ ರೀತಿ ಆಗಿದೆ ಎಂದು ತಿಳಿದು ಬಂದಿದೆ. ರದ್ದಾದ ಚೀಟಿಯನ್ನು ಗುಜುರಿಗೆ ನೀಡಲಾಗಿತ್ತು, ವಿಲೇವಾರಿ ವೇಳೆ ವಾಹನದಿಂದ ಚೀಲ ಬಿದ್ದಿರುವ ಸಾಧ್ಯತೆ ಎಂದು ತಿಳಿದು ಬಂದಿದೆ.
