Connect with us

FILM

‘ಓ ದೇವರೆ, ರಶ್ಮಿಕಾ ಮಂದಣ್ಣಳ ಬಾಳಲ್ಲಿ ಹೀಗಾಗದಿರಲಿ ‘ ಶಾಕಿಂಗ್ ನ್ಯೂಸ್ ಕೊಟ್ಟ ಜ್ಯೋತಿಷಿ ವೇಣು ಸ್ವಾಮಿ ..!

ಬೆಂಗಳೂರು :  ಕಿರಿಕ್ ಪಾರ್ಟಿ ಮೂಲಕ ಎಂಟ್ರಿಕೊಟ್ಟು ಇದೀಗ ಬಹುಭಾಷಾ ನಟಿ ಪಟ್ಟಕ್ಕೇರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ  ಟಾಲಿವುಡ್ ಹಾಗೂ ಬಾಲಿವುಡ್ ಸಿನಿಮಾರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

ಕೈ ತುಂಬಾ ಅವಕಾಶಗಳು ಅದರ ಜೊತೆ ಟ್ರೋಲ್ ಗಳು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನವರ ಜೀವನದ ಹಾದಿಯಲ್ಲಿವೆ. ರಶ್ಮಿಕಾ ಮಂದಣ್ಣನವರ ಹೆಸರು ಖ್ಯಾತ ನಟ ವಿಜಯ್​ ದೇವರಕೊಂಡ ಜೊತೆಯಲ್ಲಿ ತಳುಕು ಹಾಕಲಾಗುತ್ತಿದ್ದು ಇಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ವ್ಯಾಪಕವಾಗಿ ಹರಡಿದೆ. ಆದರೆ ಇದೀಗ ನಟಿ ರಶ್ಮಿಕಾ ಮಂದಣ್ಣನವರ ದಾಂಪತ್ಯ ಜೀವನದ ಬಗ್ಗೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅಘಾತಕಾರಿ ಭವಿಷ್ಯ ನುಡಿದಿದ್ದಾರೆ.ಅಂದಹಾಗೇ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿ ಬದುಕಿನ ಆರಂಭದ ಕಿರಿಕ್ ಪಾರ್ಟಿ ಸಿನಿಮಾದ ವೇಳೆಯಲ್ಲಿ ಇದೇ ವೇಣು ಸ್ವಾಮಿ ಅವರಿಂದಲೇ ವಿಶೇಷ ಪೂಜೆ ಮಾಡಿಸಿದ್ದರು. ಅಷ್ಟೇ ಅಲ್ಲದೇ ರಕ್ಷಿತ್ ಶೆಟ್ಟಿ ಜೊತೆಗಿನ ಮದುವೆ ಮುರಿದುಕೊಂಡಿದ್ದು ಈ ಜ್ಯೋತಿಷಿಯವರ ಸಲಹೆಯಿಂದಲೇ ಎನ್ನಲಾಗುತ್ತಿದೆ. ಇದೀಗ ವೇಣು ಸ್ವಾಮಿಯವರು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡರವರ ವೈವಾಹಿಕ ಜೀವನ ಹೇಗಿರುತ್ತದೆ ಎನ್ನುವುದನ್ನು ಹೇಳಿದ್ದಾರೆ ರಶ್ಮಿಕಾ ಹಾಗೂ ವಿಜಯ್ ದೇವರೊಂಡ ಪರಸ್ಪರ ಪ್ರೀತಿಯಲ್ಲಿರುವುದು ಗುಟ್ಟೇನೂ ಅಲ್ಲ. ಅವರಿಬ್ಬರು ವಿವಾಹ ಆಗಲಿದ್ದಾರೆ. ಆದರೆ ವಿವಾಹವಾದ ಬಳಿಕ ಇಬ್ಬರೂ ದೂರವಾಗಲಿದ್ದಾರೆ. ಇದು ಖಚಿತ. ವಿಜಯ್ ದೇವರಕೊಂಡ ಜೊತೆ ಮದುವೆಯಾದರೆ ಶೀಘ್ರದಲ್ಲೇ ವಿಚ್ಛೇದನನೂ ಆಗಲಿದೆ ಎಂದಿದ್ದಾರೆ.“ಇದೇ ಕಾರಣಕ್ಕೆ ಅವರು ನನ್ನೊಂದಿಗೆ ಮಾತನಾಡುವುದು ಬಿಟ್ಟು, ನನ್ನ ಸಂಪರ್ಕ ಕಡಿದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಸಮಾಜಕ್ಕೆ ನಾಯಕಿ ಆಗಿರಬಹುದು ಆದರೆ ನನಗೆ ಕೇವಲ ಕ್ಲೈಂಟ್ ಅಷ್ಟೆ. ಅವರ ಜನಪ್ರಿಯತೆ ನೋಡಿ ನಾನು ಭವಿಷ್ಯ ಹೇಳುವುದಿಲ್ಲ, ಅವರ ಗ್ರಹಗತಿ ನೋಡಿ ಭವಿಷ್ಯ ಹೇಳುತ್ತೇನೆ. ನಾನು ಹೇಳಿದ ನಿಜ ಅವರಿಗೆ ಹಿಡಿಸಲಿಲ್ಲ, ಇರಲಿ ಪರವಾಗಿಲ್ಲ, ಆದರೆ ಅವರಿಬ್ಬರು ಮದುವೆಯಾಗಿ ದೂರಾಗುವುದು ಖಚಿತ” ಎನ್ನುವುದನ್ನು ಹೇಳಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ವೇಣು ಸ್ವಾಮಿಯವರ ಮಾತು ಮೀರಿ ನಟ ವಿಜಯ್ ದೇವರಕೊಂಡ ಮದುವೆಯಾಗುತ್ತಾರಾ ಅಥವಾ ಇಲ್ಲವಾ ಕಾದು ನೋಡಬೇಕು ಅಷ್ಟೇ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *