LATEST NEWS
ಲೈಟ್ ಫಿಶ್ಶಿಂಗ್ ವಿರುದ್ಧ ಉಡುಪಿಯಲ್ಲಿ ಬೋಟ್ ಚಾಲಕ-ಮಾಲೀಕರ ಪ್ರತಿಭಟನೆ

ಲೈಟ್ ಫಿಶ್ಶಿಂಗ್ ವಿರುದ್ಧ ಉಡುಪಿಯಲ್ಲಿ ಬೋಟ್ ಚಾಲಕ-ಮಾಲೀಕರ ಪ್ರತಿಭಟನೆ
ಉಡುಪಿ,ಜನವರಿ 10 : ರಾತ್ರಿ ಸಮುದ್ರದಲ್ಲಿ ಪ್ರಕರ ಬೆಳಕು ಹರಿಸುವ ಮೂಲಕ ಮೀನುಗಳನ್ನು ಆಕರ್ಷಿಸಿ ಮಾಡುವ ಲೈಟ್ ಫಿಶಿಂಗ್ ವಿರುದ್ದ ಉಡುಪಿಯಲ್ಲಿ ಮೀನುಗಾರರು ಪ್ರತಿಭಟನೆ ನಡೆಸಿದರು.
ಡೀಪ್ ಸೀ ಫಿಶಿಂಗ್ ಸಂಘದ ಅಶ್ರಯದಲ್ಲಿ ಉಡುಪಿ ಮಲ್ಪೆಯ ಮೀನುಗಾರಿಕಾ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ ಮೀನುಗಾರರು ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೀನುಗಾರ ಮುಖಂಡರು ಬೋಟ್ ಸುತ್ತಲೂ ಪ್ರಕರ ಬೆಳಕಿನ ಲೈಟ್ ಹಾಕುವ ಮೂಲಕ ಮಾಡುವ ಮೀನುಗಾರಿಕೆಯಿಂದ ಅರಬ್ಬೀ ಸಮುದ್ರದಲ್ಲಿ ಮೀನು ಸಂತತಿ ನಾಶವಾಗುತ್ತಿದೆ ಎಂದು ಆರೋಪಿಸಿದರು. ಆದರೆ ಇದನ್ನು ನಿಲ್ಲಿಸಬೇಕಾದ ಮೀನುಗಾರಿಕಾ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಇವರ ಪರವಾಗಿ ನಿಂತಿದ್ದು, ಲೈಟ್ ಫಿಶಿಂಗಿಗೆ ಬೆಂಗಾವಲಾಗಿ ನಿಂತಿದ್ದಾರೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಸಮುದ್ರದಲ್ಲಿ ಮೀನುಗಾರಿಕಾ ನಡೆಸುತ್ತಿರುವ ಮೀನುಗಾರರಿಗೆ ಕಿರುಕುಳ ನೀಡುತ್ತಿರುವ ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಪೋಲಿಸ್ ಪಡೆಯ ವಿರುದ್ದ ಕೂಡ ಅಕ್ರೋಶ ವ್ಯಕ್ತ ಪಡಿಸಿದರು.