LATEST NEWS
‘ಓ ದೇವರೆ ನಮ್ಮ ಕೇಡಿನಿಂದ ರಕ್ಷಿಸಿ’, ಕುದುರೆ ಮುಖ ಕ್ರಾಸ್ ನಿಂದ ಜೋಕಟ್ಟೆ ಕಡೆಗೆ ತೆರಳುವ ರಸ್ತೆ ದುಃಸ್ಥಿತಿ ಇದು..!

ಮಂಗಳೂರು : ಬೈಕಂಪಾಡಿ ಕೈಗಾರಿಕ ವಲಯಕ್ಕೆ ಸೇರಿರುವ MRPL ಅಧೀನದಲ್ಲಿ ಇರುವ ODC (ಕುದುರೆ ಮುಖ ಕ್ರಾಸ್ ನಿಂದ ಜೋಕಟ್ಟೆ ಕಡೆಗೆ ತೆರಳುವ) ರಸ್ತೆಯ ದುಃಸ್ಥಿತಿ ಇದಾಗಿದ್ದು ಓ ದೇವರೆ ನಮ್ಮ ಕೇಡಿನಿಂದ ರಕ್ಷಿಸಿ ಎಂದು ದೇವರ ಮೊರೆ ಹೋಗಾ ಬೇಕಾದ ಪರಿಸ್ಥಿತಿ ಇಲ್ಲಿ ಜನರದ್ದು.
SEZ ಈ ರಸ್ತೆಯ ಮೇಲ್ಭಾಗದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಿದ ತರುವಾಯ ಈ ರಸ್ತೆಯನ್ನು mrpl ಪೂರ್ತಿ ಕಡೆಗಣಿಸಿದೆ. ಹಲವು ಮನವಿ, ಪ್ರತಿಭಟನೆಗಳ ತರುವಾಯವೂ ಜಿಲ್ಲಾಡಳಿತ, KIADB ಈ ರಸ್ತೆಯನ್ನು mrpl ನಿಂದ ದುರಸ್ತಿಗೊಳಿಸಲು ಸಾಧ್ಯವಾಗಿಲ್ಲ. ಡಾ. ರಾಜೇಂದ್ರ ಕೆ ವಿ. ಜಿಲ್ಲಾಧಿಕಾರಿ ಆಗಿದ್ದ ಅವಧಿಯಲ್ಲಿ ಖುದ್ದು ಪರಿಶೀಲನೆ ನಡೆಸಿ, ಕಂಪೆನಿಗಳ ಸಭೆ ನಡೆಸಿ ದುರಸ್ತಿಗೆ ಯೋಜನೆ ಸಿದ್ದಪಡಿಸಿದರೂ MRPL ಯಾವುದಕ್ಕೂ ಬಗ್ಗಲಿಲ್ಲ. KIADB ವ್ಯಾಪ್ತಿಯ ಹಲವು ಮಧ್ಯಮ ಕೈಗಾರಿಕೆಗಳು ಈ ರಸ್ತೆಯನ್ನು ಬಳಸುತ್ತಿದ್ದರೂ KIADB ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.

ಮಂಗಳವಾರ ಈ ಕುರಿತು ಮತ್ತೊಮ್ಮೆ KIADB ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸುವಂತೆ ವಿನಂತಿಸಲಾಗಿದ್ದರೂ ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ. MRPL ಗೆ ಮತ್ತೊಮ್ಮೆ ಪತ್ರ ಬರೆಯುವುದಾಗಿ ಅವರು ಭೇಟಿಯಾದ ನಿಯೋಗಕ್ಕೆ ತಿಳಿಸಿದ್ದಾರೆ. ವಾರದೊಳಗಡೆ ಒಂದು ತೀರ್ಮಾನ ಕೈಗೊಳ್ಳದಿದ್ದಲ್ಲಿ ರಸ್ತೆ ತಡೆ ನಡೆಸುವ ಎಚ್ಚರಿಕೆ ನೀಡಲಾಗಿದೆ.