KARNATAKA
ಮಹಿಳೆ ಜೊತೆ ನಗ್ನವಾಗಿ ವಿಡಿಯೋ ಮಾಡಿಸಿ ಬ್ಲ್ಯಾಕ್‌ಮೇಲ್..!
ಬೆಂಗಳೂರು, ಡಿಸೆಂಬರ್ 21: ಹನಿ ಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯ ಪಕ್ಕದಲ್ಲಿ ಪುರುಷರನ್ನು ಬಟ್ಟೆ ಬಿಚ್ಚಿಸಿ ಕೂರಿಸಿ ಫೋಟೊ, ವಿಡಿಯೊ ಮಾಡಿಕೊಂಡು ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದ ‘ಹನಿಟ್ರ್ಯಾಪ್’ ಗ್ಯಾಂಗ್‌ನ ಒಬ್ಬ ಸದಸ್ಯನನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೀಲಸಂದ್ರ ನಿವಾಸಿ ಸಲ್ಮಾನ್ ಬಂಧಿತ ಆರೋಪಿ. ಪ್ರಕರಣದ ಕಿಂಗ್‌ಪಿನ್ ಆಗಿರುವ ಮಹಿಳೆ ದೌಲತ್, ಅಸದ್ ಮತ್ತು ಕಾಶೀಫ್ ಎಂಬುವರು ತಲೆಮರೆಸಿಕೊಂಡಿದ್ದಾರೆ. ಕಲಾಸಿಪಾಳ್ಯದ ನಿವಾಸಿ ಜಿಯಾವುಲ್ಲಾಎಂಬುವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದೂರು ನೀಡಿರುವ ಜಿಯಾವುಲ್ಲಾ ಮತ್ತು ಆತನ ಸ್ನೇಹಿತ ಶರೀಫ್ ಎಂಬುವರು ಮೊಬೈಲ್ ಫೋನ್ ರಿಪೇರಿ ಕೆಲಸ ಮಾಡುತ್ತಾರೆ. ಮನೆಯಲ್ಲೇ ರಿಪೇರಿ ಮಾಡುತ್ತಿದ್ದ ಕಾರಣ ಕಳೆದ ತಿಂಗಳು ಆತನ ಮನೆಗೆ ತೆರಳಿದ್ದ ದೌಲತ್, ತನ್ನ ಮೊಬೈಲ್ ರಿಪೇರಿ ಮಾಡಿಕೊಂಡುವಂತೆ ಒಂದು ಮೊಬೈಲ್ ಕೊಟ್ಟಿದ್ದಳು. ಮೊಬೈಲ್ ರಿಪೇರಿ ಮಾಡಿಕೊಟ್ಟ ಬಳಿಕ ಇಬ್ಬರ ಪರಿಚಯವಾಗಿತ್ತು.
ಹೀಗಿರುವಾಗ, ನ.23ರಂದು ಬೆಳಗ್ಗೆ ಮೂವರ ಜತೆ ಜಿಯಾವುಲ್ಲಾ ಮನೆಗೆ ಬಂದ ದೌಲತ್, ಆತನ ಮೇಲೆ ಸಹಚರರ ಮೂಲಕ ಹಲ್ಲೆ ಮಾಡಿಸಿದ್ದಾಳೆ. ಹನಿಟ್ರ್ಯಾಪ್‌ಗೆ ಸಿದ್ಧತೆ ಮಾಡಿಕೊಂಡೇ ಬಂದಿದ್ದ ಗ್ಯಾಂಗ್, ಜಿಯಾವುಲ್ಲಾ ಮತ್ತು ಶರೀಫ್ ಅವರನ್ನು ಬೆದರಿಸಿ ಬಟ್ಟೆ ಬಿಚ್ಚಿಸಿದ್ದಾರೆ. ನಂತರ ಅವರಿಬ್ಬರ ಪಕ್ಕದಲ್ಲಿ ಕುಳಿತುಕೊಂಡು ಫೋಟೊ ಮತ್ತು ವಿಡಿಯೊ ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ.
ಈ ಕೂಡಲೇ 25 ಸಾವಿರ ರೂ. ಕೊಡದಿದ್ದರೆ ವಿಡಿಯೊಗಳನ್ನು ಜಾಲತಾಣಗಳಿಗೆ ಅಪ್‌ಲೋಡ್ ಮಾಡಿ ಮಾನ ಕಳೆಯುತ್ತೇವೆ ಎಂದು ಬೆದರಿಸಿದ್ದಾರೆ. ಆಟೊದಲ್ಲಿ ನೀಲಸಂದ್ರ ಪೊಲೀಸ್ ವಸತಿಗೃಹ ಬಳಿ ಕರೆದೊಯ್ದು 25 ಸಾವಿರ ರೂ. ಕಿತ್ತುಕೊಂಡಿದ್ದಾರೆ. ನಂತರ ಇನ್ನೂ 5 ಲಕ್ಷ ರೂ. ಕೊಡಬೇಕು. ಇಲ್ಲದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ.
Facebook Comments
You may like
-
ಪುತ್ತೂರು ಅಕ್ರಮ ಗಾಂಜಾ ಸಾಗಾಟಕ್ಕೆ ಯತ್ನ – 40 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆದ ಪೊಲೀಸರು
-
ಕುಂಬಳೆ ಮೂಲದ ಯುವಕನಿಗೆ ಹನಿಟ್ರ್ಯಾಪ್ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪೊಲೀಸ್ ವಶಕ್ಕೆ
-
13 ವರ್ಷ ಬಾಲಕಿ ಮೇಲೆ 48 ಗಂಟೆಗಳಲ್ಲಿ 9 ಕಾಮುಕರಿಂದ 13 ಬಾರಿ ರೇಪ್
-
ಯೂಟ್ಯೂಬ್ ವಿಡಿಯೋಗಾಗಿ ಬಾಲಕರ ಕಿಡ್ನಾಪ್….!!
-
ಮಂಗಳೂರು ಬಸ್ ನಲ್ಲಿ ಲೈಂಗಿಕ ಕಿರುಕುಳ: ಯುವತಿ ಮಾಡಿದ ಪೋಸ್ಟ್ ವೈರಲ್
-
ಅಂಡರ್ ವೇರ್ ನಲ್ಲಿ 2.15 ಕೆಜಿ ಚಿನ್ನ ಸಾಗಾಟಕ್ಕೆ ಯತ್ನ ಇಬ್ಬರು ಆರೆಸ್ಟ್
You must be logged in to post a comment Login