LATEST NEWS
ಉಕ್ರೇನ್ ರಷ್ಯಾ ಯುದ್ದ – ಪರಮಾಣು ಶಸ್ತ್ರಾಸ್ತ್ರ ಸಿದ್ದತೆಗೆ ಸೂಚಿಸಿ ರಷ್ಯಾ ಅಧ್ಯಕ್ಷ ಪುಟಿನ್
ಉಕ್ರೇನ್ : ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ದ ಇದೀಗ ಪರಮಾಣು ಯುದ್ಧದ ಬೀತಿಯನ್ನು ಹೆಚ್ಚಿಸಿದೆ. ಈಗಾಗಲೇ ಉಕ್ರೇನ್ ರಾಜಧಾನಿ ವಶಪಡಿಸಿಕೊಳ್ಳಲು ರಷ್ಯಾ ಪಡೆ ಹೆಣಗಾಡುತ್ತಿದ್ದು, ಹೊರಗಡೆಯಿಂದ ರಷ್ಯಾದ ಮೇಲೆ ವಿವಿಧ ನಿರ್ಭಂಧಗಳನ್ನು ವಿವಿಧ ರಾಷ್ಟ್ರಗಳು ಹಾಕುತ್ತಿವೆ.
ಇಂದು ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ನ್ಯಾಟೋ ದೇಶಗಳಿಂದ ನಮ್ಮ ದೇಶದ ಮೇಲೆ ಆತಂಕಕಾರಿ ಹೇಳಿಕೆಗಳು ಬರುತ್ತಿದ್ದು, ವಿವಿಧ ರೀತಿಯ ನಿರ್ಬಂಧಗಳನ್ನು ದೇಶದ ಮೇಲೆ ಹೇರುತ್ತಿದ್ದಾರೆ. ಈ ಹಿನ್ನಲೆ ರಷ್ಯಾದ ಪರಮಾಣು ಶಸ್ತ್ರಾಸ್ತ್ರಗಳನ್ನು ಉಡಾವಣೆಗೆ ಹೆಚ್ಚಿನ ಸಿದ್ಧತೆಗಾಗಿ ಸಿದ್ಧಪಡಿಸಿ ಎಂದು ರಷ್ಯಾದ ರಕ್ಷಣಾ ಮಂತ್ರಿ ಮತ್ತು ಮಿಲಿಟರಿಯ ಜನರಲ್ ಸ್ಟಾಫ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.
ಪಾಶ್ಚಿಮಾತ್ಯ ದೇಶಗಳು ಆರ್ಥಿಕ ಕ್ಷೇತ್ರದಲ್ಲಿ ನಮ್ಮ ದೇಶದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ, ಪ್ರಮುಖ ನ್ಯಾಟೋ ಸದಸ್ಯರ ಉನ್ನತ ಅಧಿಕಾರಿಗಳು ನಮ್ಮ ದೇಶದ ಬಗ್ಗೆ ಆಕ್ರಮಣಕಾರಿ ಹೇಳಿಕೆಗಳನ್ನು ನೀಡಿದ್ದಾರೆ” ಎಂದು ಪುಟಿನ್ ತಿಳಿಸಿದ್ದಾರೆ.
ಈಗಾಗಲೇ ಪುಟಿನ್ ಉಕ್ರೇನ್‌ನಲ್ಲಿನ ಸಂಘರ್ಷದಲ್ಲಿ ನೇರವಾಗಿ ಮಧ್ಯಪ್ರವೇಶಿಸುವ ಯಾವುದೇ ರಾಷ್ಟ್ರಗಳ ವಿರುದ್ಧ ಕಠಿಣವಾಗಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದರು ಮತ್ತು ಅವರು ನಿರ್ದಿಷ್ಟವಾಗಿ ತಮ್ಮ ದೇಶದ ಪರಮಾಣು ಶಕ್ತಿಯ ಸ್ಥಿತಿಯ ಭೀತಿಯನ್ನು ಹೆಚ್ಚಿಸಿದ್ದಾರೆ.