Connect with us

    LATEST NEWS

    ಹಿಜಬ್ ವಿವಾದ – ಕಾನೂನು ಹೋರಾಟದ ಎಚ್ಚರಿಕೆ ನೀಡಿದ NSUI ಸಂಘಟನೆ

    ಉಡುಪಿ ಜನವರಿ 21: ಉಡುಪಿ ಸರಕಾರಿ ಕಾಲೇಜಿನಲ್ಲಿ 8 ವಿದ್ಯಾರ್ಥಿನಿಯರು ನಡೆಸುತ್ತಿರುವ ತರಗತಿಯಲ್ಲಿ ಹಿಜಬ್ ಧರಿಸಲು ಅವಕಾಶ ಕಲ್ಪಿಸಲು ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ NSUI ಸಂಘಟನೆ ರಾಜ್ಯ ಸದಸ್ಯರು ಭೇಟಿ ಕೊಟ್ಟಿದ್ದು, ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.


    ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಗೆ ಮನವಿ ನೀಡಿದ NSUI, ಹಿಜಬ್ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಿದೆ. ಈ ಘಟನೆಯಲ್ಲಿ NSUI ಯಾವುದೇ ರಾಜಕೀಯವನ್ನು ಮಾಡುವುದಿಲ್ಲ ರಾಜ್ಯ ಸರ್ಕಾರ ಎಲ್ಲರನ್ನು ಸಮಾನವಾಗಿ ಕಾಣಬೇಕು.

    ಈ ವಿಚಾರವನ್ನು ಶೀಘ್ರ ಪರಿಹರಿಸಬೇಕು. ವಿದ್ಯಾರ್ಥಿಗಳು 25 ದಿನಗಳಿಂದ ತರಗತಿಯಿಂದ ಹೊರಗೆ ಇರುವುದರಿಂದ ಅವರು ಶೈಕ್ಷಣಿಕವಾಗಿ ಬಹಳಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಯದಿದ್ದರೆ ಕಾಲೇಜಿನ ಕ್ಯಾಂಪಸ್ ನಲ್ಲಿ NSUI ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *