Connect with us

LATEST NEWS

ಎನ್​ಆರ್​ಐಗಳು ತಮ್ಮ ದೇಶದ ಮೊಬೈಲ್ ನಂಬರ್​​ನಿಂದಲೇ ಯುಪಿಐ ಬಳಕೆ ಸಾಧ್ಯ

ನವದೆಹಲಿ, ಜುಲೈ 5: ಐಡಿಎಫ್​​​ಸಿ ಫಸ್ಟ್ ಬ್ಯಾಂಕು ತನ್ನ ಎನ್​ಆರ್​ಐ ಗ್ರಾಹಕರಿಗೆ ಹೊಸ ಸರ್ವಿಸ್ ಆಫರ್ ಮಾಡಿದೆ. ಅನಿವಾಸಿ ಭಾರತೀಯರ ಯುಪಿಐ ಮೂಲಕ ಭಾರತದಲ್ಲಿ ಹಣ ವರ್ಗಾವಣೆ ಮಾಡಲು ಈ ಬ್ಯಾಂಕ್ ಅನುವು ಮಾಡಿಕೊಟ್ಟಿದೆ. ಅದೂ ಭಾರತೀಯ ಮೊಬೈಲ್ ನಂಬರ್ ಬಳಸದೇ ಯುಪಿಐ ಮೂಲಕ ಟ್ರಾನ್ಸಾಕ್ಷನ್ ನಡೆಸಲು ಅವಕಾಶ ಕೊಟ್ಟಿದೆ.

ಐಡಿಎಫ್​​ಸಿ ಫಸ್ಟ್ ಬ್ಯಾಂಕ್​​ನ ಎನ್​ಆರ್​ಇ ಮತ್ತು ಎನ್​ಆರ್​​ಒ ಬ್ಯಾಂಕ್ ಅಕೌಂಟ್ ಹೊಂದಿರಬೇಕು. ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಹಾಂಕಾಂಗ್, ಮಲೇಷ್ಯಾ, ಓಮನ್, ಕತಾರ್, ಸೌದಿ ಅರೇಬಿಯಾ, ಸಿಂಗಾಪುರ್, ಯುಎಇ, ಯುಕೆ, ಅಮೆರಿಕ ಇತ್ಯಾದಿ 12 ದೇಶಗಳಲ್ಲಿರುವ ಎನ್​ಆರ್​​ಐಗಳಿಗೆ ಇಂಥದ್ದೊಂದು ಆಫರ್ ಇದೆ. ಇವರು ಉಚಿತವಾಗಿ ಈ ಯುಪಿಐ ಸರ್ವಿಸ್ ಬಳಸಬಹುದು.

ಐಡಿಎಫ್​​ಸಿ ಫಸ್ಟ್ ಬ್ಯಾಂಕ್​​ನ ಈ ಆಫರ್​​ನ ವಿಶೇಷತೆ ಎಂದರೆ ಇದರಲ್ಲಿ ಫಾರೀನ್ ಎಕ್ಸ್​​ಚೇಂಜ್ ಚಾರ್ಜಸ್ ಇರೋದಿಲ್ಲ. ಭಾರತಕ್ಕೆ ಬಂದಾಗ ಯುಪಿಐ ಬಳಸಬಹುದು. ತಮ್ಮ ದೇಶದಲ್ಲಿ ಇದ್ದುಕೊಂಡೇ ಭಾರತದಲ್ಲಿರುವವರಿಗೆ ಶುಲ್ಕರಹಿತವಾಗಿ ಹಣ ರವಾನೆ ಮಾಡಬಹುದು.

ಅನಿವಾಸಿ ಭಾರತೀಯರು ಐಡಿಎಫ್​​ಸಿ ಫಸ್ಟ್ ಬ್ಯಾಂಕ್​ನಲ್ಲಿ ಎನ್​ಆರ್​​ಇ ಅಥವಾ ಎನ್​​ಆರ್​​ಒ ಅಕೌಂಟ್ ತೆರೆದಿರಬೇಕು. ಫೋನ್​ಪೇ, ಗೂಗಲ್ ಪೇ, ಪೇಟಿಎಂ ಇತ್ಯಾದಿ ಯುಪಿಐ ಪ್ಲಾಟ್​​ಫಾರ್ಮ್​​ಗಳಲ್ಲಿ ಈ ಅಕೌಂಟ್ ಅನ್ನು ಜೋಡಿಸಬೇಕು. ತಮ್ಮ ಅಂತಾರಾಷ್ಟ್ರೀಯ ಮೊಬೈಲ್ ನಂಬರ್ ಇದ್ದರೆ ಸಾಕು. ಭಾರತೀಯ ಸಿಮ್ ಬಳಸಬೇಕು ಎಂದೇನಿಲ್ಲ. ಭಾರತೀಯರು ಬಳಸುವ ರೀತಿಯಲ್ಲೇ ಎನ್​​ಆರ್​​ಐಗಳು ಯುಪಿಐ ವಹಿವಾಟುಗಳನ್ನು ಮಾಡಬಹುದು. ವಿದೇಶೀ ವಿನಿಮಯ ಶುಲ್ಕ ಪಾವತಿಸಬೇಕಾಗುವುದಿಲ್ಲ.

ಉದಾಹರಣೆಗೆ, ದುಬೈನಲ್ಲಿರುವ ಭಾರತೀಯರೊಬ್ಬರು, ಅಲ್ಲಿಯ ಎಟಿಸಲ್ಯಾಟ್ ಅಥವಾ ಡು ಮೊಬೈಲ್ ಸಿಮ್​ನ ನಂಬರ್ ಅನ್ನು ಬಳಸುತ್ತಿದ್ದರೂ ಕೂಡ ಐಡಿಎಫ್​​ಸಿ ಫಸ್ಟ್ ಬ್ಯಾಂಕ್​​ನಲ್ಲಿ ಎನ್​​ಆರ್​​ಇ ಅಥವಾ ಎನ್​​ಆರ್​​ಒ ಅಕೌಂಟ್ ಹೊಂದಿದ್ದರೆ ಯುಪಿಐ ಪೇಮೆಂಟ್ ಮಾಡಬಹುದು.

Share Information
Continue Reading
Advertisement
2 Comments

2 Comments

    Leave a Reply

    Your email address will not be published. Required fields are marked *