Connect with us

LATEST NEWS

ಸಿಎಎ ಅಪಪ್ರಚಾರಕ್ಕೆ ಪೊಲಿಯೋ ಲಸಿಕೆ ಕಾರ್ಯಕ್ರಮವನ್ನು ತಳಕು ಹಾಕಿದ ದುಷ್ಕರ್ಮಿಗಳು

ಸಿಎಎ ಅಪಪ್ರಚಾರಕ್ಕೆ ಪೊಲಿಯೋ ಲಸಿಕೆ ಕಾರ್ಯಕ್ರಮವನ್ನು ತಳಕು ಹಾಕಿದ ದುಷ್ಕರ್ಮಿಗಳು

ಮಂಗಳೂರು ಜನವರಿ 18:ಕೇಂದ್ರ ಸರಕಾರದ ಎನ್.ಆರ್.ಸಿ, ಸಿಎಎ ಕಾನೂನು ವಿರುದ್ಧ ಯಾವ ರೀತಿಯ ಅಪಪ್ರಚಾರ ನಡೆಯುತ್ತಿದೆ ಎಂದರೆ ಇದೀಗ ವೈದ್ಯರನ್ನೂ ಕೇಂದ್ರ ಸರಕಾರದ ಎನ್.ಆರ್.ಸಿ ದಾಖಲೆ ಸಂಗ್ರಹಿಸುವ ಸಿಬ್ಬಂದಿಗಳು ಎನ್ನುವ ಹಂತಕ್ಕೆ ತಲುಪಿದೆ.

ಜನವರಿ 19 ದೇಶದೆಲ್ಲೆಡೆ ಪೋಲಿಯೋ ಲಸಿಕೆ ಹಾಕುವ ದಿನವಾಗಿದ್ದು, ಈ ದಿನದಂದೇ ಕೇಂದ್ರ ಸರಕಾರ ತಮ್ಮ ದಾಖಲೆಗಳನ್ನು ವೈದ್ಯರ ಮೂಲಕ ಪಡೆದುಕೊಳ್ಳಲಿದೆ ಎನ್ನುವ ಅಪಪ್ರಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.

ಮುಖ್ಯವಾಗಿ ಮುಸಲ್ಮಾನ ಬಂಧುಗಳಲ್ಲಿ ಈ ರೀತಿಯ ಗೊಂದಲವನ್ನು ಸೃಷ್ಠಿಸುವ ಪ್ರಯತ್ನವನ್ನು ಕೆಲವು ಸಂಘಟನೆಗಳು ನಡೆಸುತ್ತಿದೆ. ಪೊಲಿಯೋ ಲಸಿಕೆ ಹಾಕಲು ಹೋಗುವ ಸಂದರ್ಭದಲ್ಲಿ ಯಾವುದೇ ಸಹಿಯನ್ನು ಹಾಕಬೇಡಿ, ಮೊಬೈಲ್ ಅನ್ನು ಸಿಬ್ಬಂದಿಗಳ ಕೈಗೆ ನೀಡಬೇಡಿ ಎನ್ನುವ ಮಾಹಿತಿಗಳು ಇದೀಗ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಈ ಮೂಲಕ ಪೊಲಿಯೋ ಲಸಿಕೆ ಕಾರ್ಯಕ್ರಮದಿಂದೂ ದೂರ ಇಡುವ ಷಡ್ಯಂತ್ರ ನಡೆಯುತ್ತಿದೆ‌.

Share Information
Continue Reading
Advertisement
Click to comment

Leave a Reply

Your email address will not be published. Required fields are marked *