DAKSHINA KANNADA
ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಉಪ್ಪಿನಂಗಡಿ ಪೊಲೀಸರು

ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಉಪ್ಪಿನಂಗಡಿ ಪೊಲೀಸರು
ಉಪ್ಪಿನಂಗಡಿ ಮಾರ್ಚ್ 13: ಪುತ್ತೂರು ಸುತ್ತಮುತ್ತ ನಡೆದ ಕಳ್ಳತನ ಪ್ರಕರಣಗಳ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದೆ.
ಬಂಧಿತ ಆರೋಪಿಯನ್ನು ಚಿಕ್ಕಮಗಳೂರು ಶಂಕರಪುರ ನಿವಾಸಿ ಕುಖ್ಯಾತ ಕಳ್ಳ ಶೌಕತ್ ಆಲಿ ಎಂದು ಗುರುತಿಸಲಾಗಿದೆ. ಪುತ್ತೂರು ಗ್ರಾಮಾಂತರ ವೃತ್ತ ರವರ ನೇತ್ರತ್ವದ ಅಪರಾಧ ಪತ್ತೆ ದಳ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರ ಅಪರಾಧ ಪತ್ತೆ ದಳವು ಉಪ್ಪಿನಂಗಡಿ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ಎಂಬಲ್ಲಿ ಈ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಕುಖಾತ್ಯ ಕಳ್ಳ ಉಪ್ಪಿನಂಗಡಿ ಪೊಲೀಸ್ ಠಾಣಾ, ಅದರ್ಶನಗರ, ನೆಕ್ಕಿಲಾಡಿ, ಕಲ್ಲೇರಿ, ಕೆಂಪಿ ಮಜಲು, ಪುತ್ತೂರು ನಗರ ಠಾಣಾ ಸರಹದ್ದಿನ ಅಜೇಯ ನಗರ, ಮುರ , ಬನ್ನೂರು ಹಾರಾಡಿ , ಕೋಡಿಂಬಾಡಿ, ಅರ್.ಟಿ ಓ ಬಳಿಯ ಜೈನರಗುರಿ , ಸಾಲ್ಮರ, ದಾರಂದಕುಕ್ಕು ಬಂಟ್ವಾಳ ನಗರ ಠಾಣಾ ಸರಹದ್ದಿನ ಕಲ್ಲಡ ಮೊದಲಾದ ಸ್ಥಳಗಳಲ್ಲಿ ಬೀಗ ಹಾಕಿದ ಮನೆಗಳಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಬಂಧಿತನಿಂದ 13 ಪ್ರಕರಣಗಳನ್ನು ಪತ್ತೆ ಹಚ್ಚಿ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಸ್ವಾಧೀನಪಡಿಸಲಾಗಿದೆ.