Connect with us

LATEST NEWS

ಕಾರಿನಲ್ಲಿ ಹೆಣವಾಗಿ ಸಿಕ್ಕ ನಟೋರಿಯಸ್ ಕ್ರಿಮಿನಲ್ ತಸ್ಲೀಮ್

ಕಾರಿನಲ್ಲಿ ಹೆಣವಾಗಿ ಸಿಕ್ಕ ನಟೋರಿಯಸ್ ಕ್ರಿಮಿನಲ್ ತಸ್ಲೀಮ್

ಮಂಗಳೂರು : ನಿನ್ನೆ ಇನ್ನೋವಾ ಕಾರಿನಲ್ಲಿ ಹಣವಾಗಿ ಸಿಕ್ಕಿದ್ದ ನಟೋರಿಯಸ್ ಕ್ರಿಮಿನಲ್ ತಸ್ಲೀಮ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಹಿಂದೆ ಭೂಗತ ಜಗತ್ತಿನ ಕೈವಾಡ ಇದೆ ಎಂದು ಶಂಕಿಸಲಾಗಿದೆ.

ಬಂಟ್ವಾಳ ಸಜೀಪದ ನಗ್ರಿ ಗುಡೆಯಲ್ಲಿ ಅನಾಥವಾಗಿದ್ದ ಕಾರ ಒಂದರಲ್ಲಿ ಈತನ ಶವ ಪತ್ತೆಯಾಗಿದೆ. ಅಪಹರಣ ಮಾಡಿ ಕೊಲೆ ಮಾಡಿ ಇಲ್ಲಿ ಕಾರು ತಂದು ನಿಲ್ಲಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಕೇರಳದ ನಟೋರಿಯಸ್ ಕ್ರಿಮಿನಲ್ ತಸ್ಲೀಮ್ 2017 ರಲ್ಲಿ ಮಂಗಳೂರು ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಪೆಟ್ರೊಲ್ ಪಂಪ್ ಬಳಿ ಕೇರಳ ಮೂಲದ ನಟೋರಿಯಸ್ ರೌಡಿ ಕಾಲಿಯಾ ರಫೀಕ್ ಮರ್ಡರ್ ಕೇಸ್ ನಲ್ಲಿ ಈತ ಪ್ರಮುಖ ಆರೋಪಿಗಾಗಿದ್ದ, ಅಲ್ಲದೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಮಂಗಳೂರಿನ ಕಾರ್ ಸ್ಟ್ರೀಟ್ ನ ಅರುಣಾ ಜುವ್ಯೆಲ್ಲರ್ಸ್ ಕಳ್ಳತನ ಪ್ರಕರಣದಲ್ಲೂ ಬಾಗಿಯಾಗಿದ್ದು, ಪೊಲೀಸರು ಇತನನ್ನು ಬಂಧಿಸಿದ್ದರು. ಇತನನ್ನು ಬೆಳಗಾವಿ ಜೈಲಿನಲ್ಲಿಡಲಾಗಿತ್ತು. ಎರಡು ದಿನಗಳ ಹಿಂದೆಯಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ತಸ್ಲೀಮ್ ಕೊಲೆ ಪ್ರಕರಣದಲ್ಲಿ ಈಗ ಭೂಗತ ಲೋಕದ ಕೈವಾಡ ಇದೆ ಎಂದು ಶಂಕಿಸಲಾಗಿದ್ದು, ಭಾರೀ ಪ್ರಮಾಣದ ಚಿನ್ನದ ಡೀಲ್ ವಿಚಾರ ಸೇರಿದಂತೆ ಹಲವು ವೈಷಮ್ಯದಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಕಳ್ಳತನ ಪ್ರಕರಣದ ಜೈಲಿನಲ್ಲಿದ್ದ ತಸ್ಲೀಮ್ ಗೆ ಹೈಕೋರ್ಟ್ ಮೂಲಕ ಜಾಮೀನು ಕೊಡಿಸಲಾಗಿತ್ತು. ಅಲ್ಲದೇ ಕಲಬುರಗಿ ಜೈಲಿನಿಂದ ಹೊರ ಬಂದವನೇ ತಸ್ಲೀಮ್ ದುಬೈಗೆ ಕರೆ ಮಾಡಿದ್ದ ಎಂದು ಹೇಳಲಾಗಿದ್ದು, ಜೈಲಿನ ಬಳಿ ಬಂದು ಮೂವರು ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು ಎಂದು ಹೇಳಲಾಗಿದ್ದು, ಬಳಿಕ ತಸ್ಲೀಮ್ ನನ್ನು ಯಾರೋ ಕಿಡ್ನಾಪ್ ಮಾಡಿ ಕೊಂಡ ಹೋಗಿದ್ದಾರೆ ಎಂದು ಸ್ಥಳೀಯ ಠಾಣೆಗೆ ಕಿಡ್ನಾಪ್ ದೂರು ನೀಡಿದ್ದರು. ನಂತರ ಕಾರನ್ನು ಚೇಜ್ ಮಾಡಿಕೊಂಡು ಬಂದಿದ್ದ ಜೇವರ್ಗಿ ಪೊಲೀಸರು, ಆದರೆ ಪೊಲೀಸರಿಗೆ ಸಿಗುವ ಮೊದಲೆ ತಸ್ಲೀಮ್ ನನ್ನು ಕೊಲೆ ಮಾಡಿ ಬಂಟ್ವಾಳ ತಾಲೂಕಿನ ನಗ್ರಿ ಶಾಂತಿನಗರ ಬಳಿ ಬಿಟ್ಟು ಹೋಗಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *