Connect with us

    LATEST NEWS

    ಮಲೆಯಾಳಿ ವಿಧ್ಯಾರ್ಥಿಗಳಿಗೆ ಕೇರಳಕ್ಕೆ ವಾಪಾಸಾಗಲು ಸೂಚನೆ ನೀಡಿದ ಕೇರಳ ಸಿಎಂ

    ಮಲೆಯಾಳಿ ವಿಧ್ಯಾರ್ಥಿಗಳಿಗೆ ಕೇರಳಕ್ಕೆ ವಾಪಾಸಾಗಲು ಸೂಚನೆ ನೀಡಿದ ಕೇರಳ ಸಿಎಂ

    ಮಂಗಳೂರು ಡಿಸೆಂಬರ್ 22: ಮಂಗಳೂರಿನಲ್ಲಿರುವ ಕೇರಳ ಮೂಲದ ವಿದ್ಯಾರ್ಥಿಗಳು ತವರಿಗೆ ಮರಳಲು ಕೇರಳ ಸರ್ಕಾರ ಸಾರಿಗೆ ಸೌಲಭ್ಯ ಕಲ್ಪಿಸಿದೆ. ಮಂಗಳೂರು ಗಲಭೆಗೆ ಕೇರಳ ಮೂಲದವರು ಕಾರಣ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಪೊಲೀಸ್ ಕಮಿಷನರ್ ಹರ್ಷ ದೂರಿದ್ದ ಹಿನ್ನೆಲೆಯಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳ ಸುರಕ್ಷೆ ಖಾತ್ರಿಪಡಿಸಲು ಕೇರಳ ಸರ್ಕಾರ ಅವರನ್ನು ತವರಿಗೆ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ.

    ರಾಜ್ಯ ಗೃಹಸಚಿವರ ಹೇಳಿಕೆ ಹಿನ್ನಲೆ ಕೇರಳ ಸರ್ಕಾರ, ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲೆಂದು ಶನಿವಾರ ಐದು ಸರ್ಕಾರಿ ಬಸ್‌ಗಳನ್ನು ಮಂಗಳೂರಿಗೆ ಕಳಿಸಿತ್ತು. ‘ಮಂಗಳೂರಿನಿಂದ ಕೇರಳಕ್ಕೆ ಹಿಂದಿರುಗಲು ಆಗದೆ ತೊಂದರೆ ಅನುಭವಿಸುತ್ತಿದ್ದ ವಿದ್ಯಾರ್ಥಿಗಳು ತಮ್ಮ ಸ್ಥಿತಿಯನ್ನು ಮುಖ್ಯಮಂತ್ರಿ ಕಚೇರಿಗೆ ತಿಳಿಸಿದ್ದರು. ತಕ್ಷಣ ಮಧ್ಯಪ್ರವೇಶಿಸಿದ ಕೇರಳ ಮುಖ್ಯಮಂತ್ರಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಅಗತ್ಯ ನೆರವು ನೀಡಲು ಆದೇಶಿಸಿದ್ದರು’.

    ನಗರದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಊರಿಗೆ ತಲುಪಿಸಲು ಅನುವು ಮಾಡಿಕೊಡುವಂತೆ ಕೇರಳ ಸರ್ಕಾರ ಮನವಿ ಮಾಡಿತ್ತು. ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಮುತುವರ್ಜಿ ವಹಿಸಿ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನಿರ್ದೇಶನದಂತೆ ಕೇರಳ ಕೆ.ಎಸ್.ಆರ್.ಟಿ.ಸಿ. ಬಸ್‌ಗಳ ಮೂಲಕ ಇಂದು ಸಂಜೆ ಏಳು ಗಂಟೆ ಸುಮಾರಿಗೆ ವಿದ್ಯಾರ್ಥಿಗಳನ್ನು ಕಾಸರಗೋಡಿಗೆ ಕರೆತರಲಾಯಿತು.

    ಪಂಪ್‌ವೆಲ್‌ನಿಂದ ಐದು ಬಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ಪೊಲೀಸರ ಬೆಂಗಾವಲಿನಲ್ಲಿ ಕಾಸರಗೋಡಿಗೆ ತಲುಪಿಸಿದ್ದು, ಕಂದಾಯ ಸಚಿವ ಇ. ಚಂದ್ರಶೇಖರನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ಕಾಸರಗೋಡು ಹಾಗೂ ರಾಜ್ಯದ ಇತರ ಜಿಲ್ಲೆಗಳ ವಿದ್ಯಾರ್ಥಿಗಳಿದ್ದು, 300ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕಾಸರಗೋಡಿಗೆ ತಲುಪಿಸಿ, ಬಳಿಕ ಅವರ ಊರಿಗೆ ತೆರಳಲು ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಂಡಿತು.

    ಇಂದಿನಿಂದಲೇ ಊಟ, ಆಹಾರದ ಕೊರತೆ ಉಂಟಾಗಿತ್ತು. ಹಾಸ್ಟೆಲ್ ಕ್ಯಾಂಟೀನ್‌ಗಳಿಂದ 2–3 ದಿನಗಳಿಂದ ಆಹಾರ ಲಭಿಸಿತ್ತು. ಇನ್ನೂ ಅಲ್ಲಿ ಉಳಿಯುತ್ತಿದ್ದರೆ ಆಹಾರಕ್ಕೂ ಸಮಸ್ಯೆ ತಲೆದೋರುತ್ತಿತ್ತು. ಕೇರಳ ಸರ್ಕಾರ ಹಾಗೂ ಜಿಲ್ಲಾಡಳಿತ ತೆಗೆದುಕೊಂಡ ಕ್ರಮದಿಂದ ನಾವು ಸುರಕ್ಷಿತವಾಗಿ ಊರು ಸೇರುವಂತಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದರು. ಇನ್ನೂ ಯಾರಾದರೂ ವಿದ್ಯಾಥಿಗಳು ಹಾಸ್ಟೆಲ್‌ಗಳಲ್ಲಿ ಸಿಲುಕಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಿ, ಊರಿಗೆ ಕರೆ ತರಲಾಗುವುದು ಎಂದು ಕಾಸರಗೋಡು ಜಿಲ್ಲಾಡಳಿತ ತಿಳಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *