LATEST NEWS
ಪರಿಶೀಲನೆ ನಡೆಸದೇ ಕದ್ರಿ ದೇವಸ್ಥಾನದ ಧ್ವನಿವರ್ಧಕ ಬಳಕೆ ತಡೆಗೆ ಮುಂದಾದ ಮುಜರಾಯಿ ಇಲಾಖೆ
ಪರಿಶೀಲನೆ ನಡೆಸದೇ ಕದ್ರಿ ದೇವಸ್ಥಾನದ ಧ್ವನಿವರ್ಧಕ ಬಳಕೆ ತಡೆಗೆ ಮುಂದಾದ ಮುಜರಾಯಿ ಇಲಾಖೆ
ಮಂಗಳೂರು ಡಿಸೆಂಬರ್ 23: ಕದ್ರಿ ದೇವಸ್ಥಾನದಲ್ಲಿ ಧ್ವನಿ ವರ್ಧಕ ಬಳಕೆಗೆ ಬಗ್ಗೆ ದೇವಸ್ಥಾನಕ್ಕೆ ನೊಟೀಸ್ ನೀಡಿದ ಮುಜರಾಯಿ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಥಳೀಯ ನಿವಾಸಿಗಳು ದೇವಸ್ಥಾನದಲ್ಲಿ ಧ್ವನಿವರ್ಧಕ ಬಳಕೆಯಿಂದ ಸಮಸ್ಯೆ ಉಂಟಾಗುತ್ತದೆ ಎಂದು ನೀಡಿದ ದೂರಿಗೆ ಮುಜರಾಯಿ ಇಲಾಖೆ ಯಾವುದೇ ಪರಿಶೀಲನೆ ನಡೆಸದೇ ಕದ್ರಿ ದೇವಸ್ಥಾನಕ್ಕೆ ನೋಟಿಸ್ ನೀಡಿದೆ ಎಂಬ ಆರೋಪಗಳು ಈಗ ಕೇಳಿ ಬರುತ್ತಿದೆ.
ಸ್ಥಳೀಯರ ದೂರಿಗೆ ಸಂಬಂಧಿಸಿದಂತೆ, ಇಲ್ಲಿ ಮೂಡುವ ಪ್ರಶ್ನೆ ಏನೆಂದರೆ ದೇವಸ್ಥನದ ದ್ವನಿವರ್ಧಕ ದಿಂದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆಯೇ ? ಎಂಬುದನ್ನು ಪರಿಶೀಲಿಸದೇ ಕದ್ರಿ ದೇವಸ್ಥಾನದ ಧ್ವನಿವರ್ಧಕ ಬಳಕೆ ತಡೆಗೆ ಮುಜರಾಯಿ ಇಲಾಖೆ ಮುಂದಾಗಿರುವುದು ಈಗ ಆಕ್ರೋಶಕ್ಕೆ ಕಾರಣ ವಾಗಿದೆ. ಮೊದಲೇ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಇರುವ ರಾಜ್ಯ ಸರಕಾರಕ್ಕೆ ಈ ಬೆಳವಣಿಗೆ ಇಕ್ಕಟ್ಟಿಗೆ ಸಿಲುಕಿಸಿದೆ. ಇನ್ನೊಂದೆಡೆ ರಾಜ್ಯ ಸರಕಾರದ ವಿರುದ್ದ ಹಿಂದೂ ಪರ ಸಂಘಟನೆಗಳು ಹೋರಾಟಕ್ಕೆ ಅಣಿಯಾಗುತ್ತವೆ. ಮುಂಬರುವ ದಿನಗಳಲ್ಲಿ ಈ ವಿಚಾರ ರಾಜಕೀಯವಾಗಿ ಬಳಕೆ ಯಾಗಲಿದೆ ಎಂಬುದಂತು ಸ್ಪಷ್ಟ.
ಪೋರ್ಜರಿ ಸಹಿ ಪ್ರಕರಣ ದಾಖಲು
ಈ ನಡುವೆ ದೂರು ನೀಡಿರುವ ಸ್ಥಳೀಯ ನಿವಾಸಿ ಬ್ಲೇನಿ ಡಿಸೋಜಾ ವಿರುದ್ದ ಪೋರ್ಜರಿ ಪ್ರಕರಣ ದಾಖಲಾಗಿದೆ, ದೇವಾಲಯದ ದ್ವನಿವರ್ಧಕದಿಂದ ಕಿರಿಕಿರಿಆಗುತ್ತಿದೆ ಎಂದು ಆರೋಪಿಸಿ ದೂರು ನೀಡಿದ್ದ ಬ್ಲೇನಿ ಡಿಸೋಜಾ ಫೋರ್ಜರಿ ಮಾಡಿರುವ ದೂರು ಪತ್ರ ಎಂಬುದು ಈಗ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ದೂರುದಾರ ಬ್ಲೇನಿ ಡಿಸೋಜಾ ವಿರುದ್ದವೇ ಕದ್ರಿ ಠಾಣಿಯಲ್ಲಿ ಈಗ ದೂರು ದಾಖಲಾಗಿದೆ.
ದೂರುದಾರ ಬ್ಲೇನಿ ಡಿಸೋಜಾ ರಿಂದ ಕಾನೂನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನನ್ನೊಂದಿಗೆ ಫ್ಲಾಟ್ ಇತರ ನಿವಾಸಿಗಳು ದ್ವನಿವರ್ಧಕದಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದು ಬ್ಲೇನಿ ಡಿಸೋಜಾ ಫ್ಲಾಟ್ ನಿವಾಸಿಗಳು ಸಹಿ ಮಾಡಿದ ಪತ್ರ ಮಂಗಳೂರು ಮೇಯರ್ ಅವರಿಗೆ ನೀಡಿದ್ದರು. ಆದರೆ ಬ್ಲೇನಿ ಡಿಸೋಜಾ ಇತರರ ಸಹಿಗಳನ್ನು ಫೋರ್ಜರಿಮಾಡಿ ನೀಡಿರುವುದಾಗಿ ಫ್ಲಾಟ್ ಇತರ ನಿವಾಸಿಗಳು ದೂರಿದ್ದಾರೆ. ಈ ಪರಿಣಾಮ ಬ್ಲೇನಿ ಡಿಸೋಜಾ ವಿರುದ್ದ ಕದ್ರಿ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.