DAKSHINA KANNADA
ವಕ್ಪ್ ಬೋರ್ಡ್ ಅಲ್ಲ ಅದು ಬೋಗಸ್ ಬೋರ್ಡ್: ಪ್ರಮೋದ್ ಮುತಾಲಿಕ್ ಆರೋಪ

ಪುತ್ತೂರು, ಸೆಪ್ಟೆಂಬರ್ 19: ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಬೋರ್ಡ್ ಅಲ್ಲ ಅದು ಬೋಗಸ್ ಬೋರ್ಡ್ ಶ್ರೀರಾಮ ಸೇನೆಯ ಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್ ತಮಿಳುನಾಡಿನ ಒಂದು ಗ್ರಾಮವನ್ನೇ ವಕ್ಪ್ ಬೋರ್ಡ್ ತನ್ನದೆಂದು ಹೇಳಿಕೊಂಡಿರುವುದು ಇಡೀ ದೇಶದ ಕಣ್ಣು ತೆರೆಸಿದೆ, ವಕ್ಫ್ ಬೋರ್ಡ್ ಸಂಪೂರ್ಣವಾಗಿ ಇಡೀ ದೇಶದಲ್ಲಿ ರದ್ದಾಗಬೇಕು. ಇದೊಂದು ಡೇಂಜರಸ್ ಬೋರ್ಡ್, ಇಡೀ ಸಮಾಜದ ದೇಶದ ಆಸ್ತಿಯನ್ನು ನುಂಗುತ್ತಿರುವ ಈ ವಕ್ಫ್ ಬೋರ್ಡನ್ನು ಕೂಡಲೇ ರದ್ದು ಮಾಡಬೇಕು, ಕೇಂದ್ರ ಸರಕಾರಕ್ಕೆ ಈ ಬಗ್ಗೆ ಒತ್ತಾಯವನ್ನು ಮಾಡಲಾಗುವುದು ಎಂದಿದ್ದಾರೆ.

ಪಿ ಎಫ್ ಐ ಮತ್ತು ಎಸ್ ಡಿ ಪಿ ಐ ಸಂಘಟನೆಯನ್ನು ದೇಶದಾದ್ಯಂತ ಕೂಡಲೇ ನಿಷೇಧಿಸಬೇಕು, ಈ ಸಂಬಂಧ ಮುಂದಿನ ತಿಂಗಳಿಂದ ರಾಜ್ಯದಾದ್ಯಂತ ಹೋರಾಟವನ್ನು ನಡೆಸಲಾಗುವುದು ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.