Connect with us

    LATEST NEWS

    ಬೀದಿ ನಾಯಿಯನ್ನು ಕಾರಿಗೆ ಕಟ್ಟಿ ಎಳೆದೊಯ್ದ ವೈದ್ಯ…..!!

    ಜೈಪುರ ಸೆಪ್ಟೆಂಬರ್ 19: ವೈದ್ಯನೊಬ್ಬ ನಾಯಿಯನ್ನು ತನ್ನ ಕಾರಿಗೆ ಚೈನ್ ನಲ್ಲಿ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ವೈದ್ಯನ ಈ ಅಮಾನವೀಯ ವರ್ತನೆಗೆ ಆಕ್ರೋಶ ವ್ಯಕ್ತವಾಗಿದ್ದು, ಆತನ ಮೇಲೆ ಪ್ರಾಣಿಹಿಂಸೆ ಪ್ರಕರಣ ದಾಖಲಾಗಿದೆ.


    ರಾಜಸ್ಥಾನದ ಜೋಧ್‍ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ವೈದ್ಯನೋರ್ವ ನಾಯಿಯ ಕುತ್ತಿಗೆಗೆ ಚೈನ್ ಕಟ್ಟಿ, ತನ್ನ ಕಾರಿಗೆ ಕಟ್ಟಿಕೊಂಡು ವಾಹನ ಚಲಾಯಿಸಿರುವುದನ್ನು ಕಾಣಬಹುದಾಗಿದೆ. ಇದೇ ವೇಳೆ ಬೈಕ್ ಸವಾರರೊಬ್ಬರು ಪ್ರಾಣಿ ಹಿಂಸೆ ಪಡುತ್ತಿರುವುದನ್ನು ಕಂಡು ತಕ್ಷಣ ಕಾರಿಗೆ ಅಡ್ಡಹಾಕಿದ್ದಾರೆ. ನಂತರ ನಾಯಿಯ ಕುತ್ತಿಗೆಗೆ ಕಟ್ಟಿದ್ದ ಚೈನ್ ಬಿಚ್ಚಿ, ಘಟನೆ ಬಗ್ಗೆ ನಗರದ ಡಾಗ್ ಹೋಮ್ ಫೌಂಡೇಶನ್‍ಗೆ ಮಾಹಿತಿ ನೀಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ನಾಯಿಗೆ ಸ್ಥಳೀಯರು ಆಂಬುಲೆನ್ಸ್ ವ್ಯವಸ್ಥೆಗೊಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಆರೋಪಿಯನ್ನು ಡಾ. ರಜನೀಶ್ ಗಾಲ್ವಾ ಎಂದು ಗುರುತಿಸಲಾಗಿದ್ದು, ತಮ್ಮ ಮನೆಯ ಸಮೀಪವೇ ಇದ್ದ ಬೀದಿ ನಾಯಿಯನ್ನು ಬೇರೆಡೆಗೆ ಬಿಡಲು ಕರೆದುಕೊಂಡು ಹೋಗಲು ಈ ರೀತಿ ಅಮಾನವೀಯವಾಗಿ ವರ್ತಿಸಿದ್ದಾರೆ. ವೈದ್ಯನ ವಿರುದ್ದ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply