Connect with us

LATEST NEWS

ಗುಜರಿ ಸೇರಿದ ವಸ್ತುಗಳ ಹರಾಜಿನಿಂದಲೇ 188 ಕೋಟಿ ಆದಾಯ ಗಳಿಸಿದ ನೈಋತ್ಯ ರೈಲ್ವೆ ವಲಯ

ದೆಹಲಿ ಎಪ್ರಿಲ್ 10: ಬರೀ ಗುಜರಿ ವಸ್ತುಗಳ ಹರಾಜಿನಿಂದ ನೈಋತ್ಯ ರೈಲ್ವೆ ವಲಯವು ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಬರೋಬ್ಬರಿ ₹188.07 ಕೋಟಿ ದಾಖಲೆಯ ಆದಾಯ ಗಳಿಸಿರುವುದಾಗಿ ತಿಳಿಸಿದೆ.


ಇದು ನೈಋತ್ಯ ರೈಲ್ವೆಯ ಇತಿಹಾಸದಲ್ಲೇ ಅತ್ಯಧಿಕ ಗುಜರಿ ವಸ್ತುಗಳ ಮಾರಾಟವಾಗಿದ್ದು, 2022-23ರ ಹಣಕಾಸು ವರ್ಷದಲ್ಲಿ ₹180.52 ಕೋಟಿ ಗಳಿಸಿದ್ದು, ಹಿಂದಿನ ದಾಖಲೆ ಎನಿಸಿತ್ತು. ಈ ಮೂಲಕ ಸುಮಾರು 19,745 ಮೆಟ್ರಿಕ್ ಟನ್ ಹಳಿ ಹಾಗೂ ಫಿಟ್ಟಿಂಗ್, 4 ಸೇವೆ ಸಾಧ್ಯವಿರುವ ಲೋಕೋಮೋಟಿವ್, 38 ವ್ಯಾಗನ್, 56 5 ಜಖಂಗೊ ಜಖಂಗೊಂಡಿರುವ ಬೋಗಿಗಳು, 11,532 ಮೆಟ್ರಿಕ್ ಟನ್‌ ಕಬ್ಬಿಣ ಮತ್ತು 1,500 ಮೆಟ್ರಿಕ್ ಟನ್ ಕಬ್ಬಿಣೇತರ ಗುಜರಿ ಮಾರಾಟ ಮಾಡಲಾಗಿದೆ. ಸ್ರ್ಕ್ಯಾಪ್ ಮಾರಾಟವನ್ನು ಸಂಪೂರ್ಣ ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ನಡೆಯಲು ಭಾರತೀಯ ರೈಲ್ವೆಯ ಆನ್ಸೆನ್ ಇ-ಹರಾಜು ವೇದಿಕೆ www.ireps.gov.in ಮೂಲಕ ಸಾರ್ವಜನಿಕ ಹರಾಜು ನಡೆಸಲಾಗಿದೆ. ವಿಶೇಷವಾಗಿ, ನೈಋತ್ಯ ರೈಲ್ವೆ 2025ರ ಜನವರಿ 23ರಂದು ರೈಲ್ವೆ ಮಂಡಳಿ ನೀಡಿದ್ದ ₹160 ಕೋಟಿ ಗುರಿಯನ್ನು ತಲುಪಿ, ನಂತರವೂ ಹೆಚ್ಚಿನ ಸ್ರ್ಕ್ಯಾಪ್ ವಿಲೇವಾರಿ ಮಾಡುವ ಮೂಲಕ ಆದಾಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *