LATEST NEWS
ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಲವಂತ ಮಾಡಬಾರದು – ಸುಪ್ರೀಂಕೋರ್ಟ್
ನವದೆಹಲಿ ಮೇ 02: ದೇಶದ ಯಾವುದೇ ವ್ಯಕ್ತಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಲವಂತ ಮಾಡಬಾರದು ಎಂದು ಸುಪ್ರೀಂಕೋರ್ಟ್ ಇಂದು ತಿಳಿಸಿದೆ.
ಲಸಿಕೆ ಹಾಕಿಸಿಕೊಳ್ಳದ ವ್ಯಕ್ತಿಗಳಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸುವ ಕುರಿತಂತೆ ಕೆಲವು ರಾಜ್ಯ ಸರ್ಕಾರಗಳು, ಸಂಸ್ಥೆಗಳು ವಿಧಿಸಿರುವ ಷರತ್ತುಗಳು ಸರಿಯಾದುದಲ್ಲ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಪರಿಸ್ಥಿತಿಗಳಲ್ಲಿ ಅವುಗಳನ್ನು ಹಿಂಪಡೆಯಬೇಕು ಎಂದೂ ಹೇಳಿದೆ. ಆದರೆ ಪ್ರಸ್ತುತ ಲಸಿಕೆ ನೀತಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಕೋರ್ಟ್, ಸಂಪೂರ್ಣ ನೀತಿಯು ಅಸಮಂಜಸ ಮತ್ತು ಅನಿಯಂತ್ರಿತವಾಗಿದೆ ಎಂದು ಹೇಳಲು ಬರುವುದಿಲ್ಲ ಎಂದಿದೆ. ಸಾರ್ವಜನಿಕರ ಒಳಿತಿಗಾಗಿ ವಿಶಾಲ ದೃಷ್ಟಿಕೋನದಿಂದ ಸರ್ಕಾರವು ಕೆಲವು ನೀತಿಯನ್ನು ರೂಪಿಸಬಹುದು ಮತ್ತು ಷರತ್ತುಗಳನ್ನು ವಿಧಿಸಬಹುದು ಎಂದು ಕೋರ್ಟ್ ತಿಳಿಸಿದೆ.